ಪುತ್ತೂರು: ಸವಣೂರುನಲ್ಲಿ ಜರುಗಿದ ವಲಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ನರಿಮೊಗರು ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಶಾಲಾ ವಿದ್ಯಾರ್ಥಿಗಳಾದ ಕುಶಾಲ್ ಗೌಡ,ಕುಶಾಲ್ ಕುಮಾರ್,ವಿಶಾಲ್ ಗೌಡ,ಕುಶಿಕ್ ಗೌಡ, ಪ್ರಣವ್,ಲೇಖನ್,ಯಶಮಿತ್, ಗುರುದೀಪ್,ವಿಶ್ವಾಸ,ಈರಪ್ಪ, ವಿನೀತ್,ಕೌಶಿಕ್,ಅಕುಲ್ ಪ್ರತಿನಿಧಿಸಿದ್ದರು.ಲೇಖನ್ ಗೆ ಬೆಸ್ಟ್ ಚೇಸರ್ ಪ್ರಶಸ್ತಿ ದೊರಕಿರುತ್ತದೆ.
ಇವರಿಗೆ ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಪ್ರಸನ್ನ ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಇವರುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಹಾಗೂ ಜಯಚಂದ್ರ ತರಬೇತು ನೀಡಿದ್ದಾರೆ.