ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆ ನರಿಮೊಗರು ಪುತ್ತೂರು ಇದರ ಆಶ್ರಯದಲ್ಲಿ 2025-26 ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಲಕ ಹಾಗೂ ಬಾಲಕಿಯರ ಯೋಗಾಸನ ಸ್ಪರ್ಧೆ ನಡೆಯಿತು.
ಇದರಲ್ಲಿ ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳಾದ 14ವಯೋಮಾನದ ಬಾಲಕರ ವಿಭಾಗದಲ್ಲಿ ತಸ್ವಿನ್ ಯು ಪ್ರಥಮ ಸ್ಥಾನ, 14 ರ ವಯೋಮಾನದ ಬಾಲಕರ ವಿಭಾಗದಲ್ಲಿ ಆರ್ಟಿಸ್ಟಿಕ್ ಸಿಂಗಲ್ ನಲ್ಲಿ ವಿಜ್ವಲ್ ಎಮ್ ಪ್ರಥಮ ಸ್ಥಾನ, ಆರ್ಟಿಸ್ಟಿಕ್ ಪೇರ್ ನಲ್ಲಿ ತಸ್ವಿನ್ ಮತ್ತು ವಿಜ್ವಲ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಆರ್ಟಿಸ್ಟಿಕ್ ಪೇರ್ ನಲ್ಲಿ ಆತ್ಮೀ ರೈ ಹಾಗೂ ರನ್ವಿ ಕೆ ಆರ್ ದ್ವಿತೀಯ ಸ್ಥಾನ, ಹೃದಮಿಕ್ ಪೇರ್ ನಲ್ಲಿ ಗೌತಮ್, ತುಷಾರ್ ತೃತೀಯ ಸ್ಥಾನ ಪಡೆದಿದ್ದಾರೆ.
17ರ ವಯೋಮಾನದ ಬಾಲಕರ ಟ್ರಡಿಷನಲ್ ನಲ್ಲಿ ಪ್ರಥಮ್ ಕಾಯರ್ಗ ದ್ವಿತೀಯ ಸ್ಥಾನ, ಆರ್ಟಿಸ್ಟಿಕ್ ಪೇರ್ ನಲ್ಲಿ ಯತಿರಾಜ್ ಹಾಗೂ ರಕ್ಷಿತ್ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಇವರುಗಳಿಗೆ ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್, ಶಾಲಾ ಮುಖ್ಯ ಗುರು ಪ್ರಸನ್ನ ಕೆ ,ಯೋಗ ತರಬೇತುದಾರ ನವೀನ್ ಕುಮಾರ್ ಬಿ ಎನ್ ಹಾಗೂ ಯೋಗ ಶಿಕ್ಷಕಿಯಾದ ವೀಣಾ ಬಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.