ಬನ್ನೂರು ಶಾಲಾ ಶತಮಾನೋತ್ಸವ ಕಾರ್ಯಕ್ರಮದ ವಿಜ್ಞಾಪನ ಪತ್ರ ಬಿಡುಗಡೆ

0

ಪುತ್ತೂರು: ಬನ್ನೂರು ಸ.ಹಿ.ಪ್ರಾ ಶಾಲೆಯಲ್ಲಿ 2026 ಡಿಸೆಂಬರ್‌ನಲ್ಲಿ ನಡೆಯಲಿರುವ ಶಾಲಾ ಶತಮಾನೋತ್ಸವ ಕಾರ್ಯಕ್ರಮದ ವಿಜ್ಞಾಪನಾ ಪತ್ರ ಸೆ.6ರಂದು ಶಾಲೆಯಲ್ಲಿ ಬಿಡುಗಡೆಗೊಂಡಿತು.
ನಗರಸಭಾ ಸದಸ್ಯೆ ಗೌರಿ ಬನ್ನೂರು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.

ಶಾಲೆಗೆ ನೂರು ವರ್ಷ ತುಂಬುವ ಈ ಸಂದರ್ಭದಲ್ಲಿ ಶಾಲೆಯ ಅಗತ್ಯ ಬೇಡಿಕೆಗಳಾದ ತರಗತಿ ಕೊಠಡಿಗಳು, ಪ್ರಯೋಗಾಲಯ, ಗಣಕಯಂತ್ರ ಕೊಠಡಿ, ಶಾಲಾ ಆವರಣ ಗೋಡೆ, ಆಟದ ಮೈದಾನ ವಿಸ್ತರಣೆ, ಶಾಲಾ ರಂಗ ಮಂದಿರ, ಕಟ್ಟಡಗಳ ಮುಂಭಾಗಕ್ಕೆ ಇಂಟರ್ಲಾಕ್ ಅಳವಡಿಕೆ ಮೊದಲಾದ ಹತ್ತಾರು ಬೇಡಿಕೆಗಳನ್ನು ಒಳಗೊಂಡ ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಲಾಯಿತು.


ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್ ಆಚಾರ್ಯ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಗೌಡ, ಉಪಾಧ್ಯಕ್ಷರಾದ ಮಹಾಬಲ ಪೂಜಾರಿ, ನಳಿನಾಕ್ಷಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ರೈ, ಜೊತೆ ಕಾರ್ಯದರ್ಶಿ ಶಾರದಾ ಅರಸ್, ಗೌರವ ಸಲಹೆಗಾರ ನಿವೃತ್ತ ಸೈನಿಕ ವಸಂತಗೌಡ ದೇವಸ್ಯ, ನಿವೃತ್ತ ಮುಖ್ಯ ಗುರು ಮುದರ, ಇಫಾಜ್ ಬನ್ನೂರು, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಜಯಕುಮಾರ್ ಜೈನ್, ಸಂಚಾಲಕ ರಾಮ್ ಪ್ರಸಾದ್ ಮಯ್ಯ, ಅಧ್ಯಕ್ಷ ದಿನೇಶ್ ಸಾಲಿಯಾನ್, ಕಾರ್ಯದರ್ಶಿ ಹೈದರ್, ಕೋಶಾಧಿಕಾರಿ ಸತೀಶ್ ಪೂಜಾರಿ, ಉಪಾಧ್ಯಕ್ಷರಾದ ನವೀನ್ ರೈ, ಸುಂದರಿ ಜೊತೆ ಕಾರ್ಯದರ್ಶಿ ಪ್ರೀತಂ ರೈ, ಎಂಆರ್‌ಪಿಎಲ್ ನಿವೃತ ಉದ್ಯೋಗಿ ಸುಂದರ ಗೌಡ, ನಿವೃತ ಸೈನಿಕ ಹೊನ್ನಪ್ಪ ಗೌಡ, ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ಎಸ್‌ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು ಸ್ಥಳಿಯ ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಮಹಮ್ಮದ್ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here