ಪುತ್ತೂರು: ಬನ್ನೂರಿನ ಕೃಷ್ಣ ನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಗೆ ಶಾಲೆಯ ಹಿತೈಷಿಯಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೋಫೋನ್ ವಾದಕ ಎಂ.ವೇಣುಗೋಪಾಲ್ ದೇವಾಡಿಗ ಅವರು ತನ್ನ ಮಗು ತಿಯಾನ್ಶಿಯ ಜನ್ಮದಿನದ ಅಂಗವಾಗಿ, ಎವಿಜಿ ಶಾಲೆಗೆ ಬ್ಯಾಂಡ್ ಸೆಟ್ ಗಳಾದ ಡ್ರಮ್ ,ಬ್ಯಾಂಡ್ , ಟ್ರಂಪೆಲ್ಟ್ಸ್, ಮರಾಕಾಸ್ ಇತ್ಯಾದಿಗಳನ್ನು ಕೊಡುಗೆಯಾಗಿ ನೀಡಿದರು.
ಸಂಸ್ಥೆಯ ಅಧ್ಯಕ್ಷ ವೆಂಕಟರಮಣಗೌಡ ಕಳುವಾಜೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಊರಿಗೆ ಆದರ್ಶವನ್ನು ಮೆರೆದ ಉಮೇಶ್ ದೇವಾಡಿಗ, ಎಂ ವೇಣುಗೋಪಾಲ ದೇವಾಡಿಗ ಅವರ ಕುಟುಂಬಕ್ಕೆ ಮತ್ತು ಜನ್ಮದಿನವನ್ನು ಆಚರಿಸುತ್ತಿರುವ ಪುಟ್ಟ ಮಗು ತಿಯಾನ್ಶಿಗೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕ ಎ ವಿ ನಾರಾಯಣ ಮತ್ತು ಪ್ರತಿಭಾದೇವಿ ದಂಪತಿಯನ್ನು ಉಮೇಶ್ ದೇವಾಡಿಗ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿದ ಉಮೇಶ್ ದೇವಾಡಿಗ ಕುಟುಂಬಸ್ಥರಿಗೆ ಎ ವಿ ನಾರಾಯಣರವರು ಕೃತಜ್ಞತೆ ಸಲ್ಲಿಸಿದರು. ಎಂ ವೇಣುಗೋಪಾಲ್ ರವರು ಮಾತನಾಡಿ, ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ತಮ್ಮ ಮನೆತನ ಹಾಗೂ ಎವಿಜಿ ಶಾಲೆಯ ಒಡನಾಟದ ಬಗ್ಗೆ ತಿಳಿಸಿ ಕೃತಜ್ಞತೆ ಸಲ್ಲಿಸಿದರು. ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಪುಟ್ಟ ಮಗುವಿಗೆ ಶಾಲಾ ಶಿಕ್ಷಕಿಯರು ಆರತಿಯನ್ನು ಎತ್ತಿ, ತಿಲಕವಿಟ್ಟು ಉಡುಗೊರೆಯನ್ನು ನೀಡಿದರು.
ಶಾಲೆಯ ಉಪಾಧ್ಯಕ್ಷ ಉಮೇಶ್ ಮಲುವೇಳು, ಆಡಳಿತ ಅಧಿಕಾರಿ ಗುಡ್ಡಪ್ಪಗೌಡ ಬಲ್ಯ ,ನಿರ್ದೇಶಕ ಗಂಗಾಧರ ಗೌಡ ,ಉಪ ಪ್ರಾಂಶುಪಾಲೆ ಸವಿತಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕರು, ಬೋಧಕ ಬೋಧಕೇತರ ವೃಂದ, ಪೋಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಶಿಕ್ಷಕಿಯರಾದ ಶ್ವೇತಾ ಸ್ವಾಗತಿಸಿ, ಯಶುಭ ರೈ ವಂದಿಸಿದರು ಹಾಗೂ ಸುಚಿತ ಕಾರ್ಯಕ್ರಮ ನಿರೂಪಿಸಿದರು.