ಪುತ್ತೂರು: ಜೆಸಿಐ ಪ್ರತೀ ವರ್ಷ 7 ದಿನಗಳ ಕಾಲ ಜೆಸಿ ಸಪ್ತಾಹ ಆಚರಿಸುತ್ತಿದ್ದು, ಪುತ್ತೂರು ಜೆಸಿಐ ಘಟಕದ ವತಿಯಿಂದ ವಿದ್ಯಾಮಾತಾ ಅಕಾಡೆಮಿ ಕಚೇರಿಯಲ್ಲಿ ಸೆ.9ರಂದು ಸಪ್ತಾಹಕ್ಕೆ ಚಾಲನೆ ನೀಡಲಾಗಿದೆ. ಮುಂದೆ ಒಂದು ವಾರದ ಕಾರ್ಯಕ್ರಮ ನಿರಂತರ ನಡೆಯಲಿದೆ ಎಂದು ಪುತ್ತೂರು ಜೆಸಿ ಘಟಕದ ಅಧ್ಯಕ್ಷ ಭಾಗ್ಯೇಶ್ ರೈ ಅವರು ತಿಳಿಸಿದ್ದಾರೆ.
ಜೆಸಿ ಸಪ್ತಾಹ ಉದ್ಘಾಟನಾ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸೆ.10ರಂದು ಬೆಳಗ್ಗೆ ವೆಬ್ ಪೀಪಲ್ ಸಂಸ್ಥೆಯಲ್ಲಿ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಅಪರಾಹ್ನ ಜಿಡೆಕಲ್ಲು ಸರಕಾರಿ ಪದವಿ ಕಾಲೇಜಿನಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಸೆ.11ರಂದು ಬೆಳಗ್ಗೆ ವಿದ್ಯಾಮಾತಾ ಆಕಾಡೆಮಿ ಕಚೇರಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಅಪರಾಹ್ನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟ ನಡೆಯಲಿದೆ ಎಂದರು. ಸೆ.12ರಂದು ಬೆಳಗ್ಗೆ ದರ್ಬೆ ಸಚ್ಚಿದಾನಂದ ಸಭಾಭವನದಲ್ಲಿ ವ್ಯವಹಾರ ನೆಟ್ವರ್ಕಿಂಗ್ ಸಭೆ ನಡೆಯಲಿದೆ. ಬಳಿಕ ಜಿ.ಎಲ್. ವನ್ ಮಾಲ್ನಲ್ಲಿ ನಾಮಫಲಕದೊಂದಿಗೆ ವ್ಯವಹಾರ ದಿನಕ್ಕೆ ಚಾಲನೆ ನೀಡಲಾಗುತ್ತದೆ. ಸೆ.13ರಂದು ಸುದಾನ ಪ.ಪೂ. ಕಾಲೇಜಿನಲ್ಲಿ “ಕರ್ತವ್ಯಕ್ಕಾಗಿ ಧ್ವನಿ- ಮಾನವ ಕರ್ತವ್ಯ ಮತ್ತು ಮನವಿ ದಿನ’ ನಡೆಯಲಿದೆ. ಸೆ.14ರಂದು ಪುತ್ತೂರು ನಗರದಲ್ಲಿ ಆಮಂತ್ರಣ ದಿನ- ಬನ್ನಿ ಜೆಸಿಐ ಸೇರಿ’ ನಡಿಗೆ ಜಾಥಾ ನಡೆಯಲಿದೆ. ಇದಾದ ಬಳಿಕ ವಿದ್ಯಾಮಾತಾ ಅಕಾಡೆಮಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತುಳುನಾಡಿನ ಭೋಜನ “ಪುದ್ವಾರ್’ ನಡೆಯಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೆಸಿಐ ಪುತ್ತೂರು ನಿಕಟಪೂರ್ವ ಅಧ್ಯಕ್ಷ ಮೋಹನ್ ಕೆ., ಕಾರ್ಯದರ್ಶಿ ಮನೋಹರ ಪಾಟಾಳಿ, ಲೇಡಿ ಕೋ ಆರ್ಡಿನೇಟರ್ ಆಶಾ ಮೋಹನ್, ಯೋಜನಾ ನಿರ್ದೇಶಕ ರುಕ್ಮಯ ಉಪಸ್ಥಿತರಿದ್ದರು.