ಪುತ್ತೂರು: ಕಾವು-ಪಳ್ಳತ್ತೂರು ಮುಖ್ಯ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದ್ದು ಅದರ ದುರಸ್ತಿಗೆ ಮತ್ತು ಈಶ್ವರಮಂಗಲ ಕೆಳಗಿನ ಪೇಟೆಯಲ್ಲಿ ರಸ್ತೆ ಬದಿಯಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿರುವುದನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಈಶ್ವರಮಂಗಲ ವತಿಯಿಂದ ಪುತ್ತೂರು ಲೋಕೋಪಯೋಗಿ ಇಲಾಖೆಗೆ ಸೆ.9ರಂದು ಮನವಿ ಸಲ್ಲಿಸಲಾಯಿತು.
ಎಸ್‌ಡಿಪಿಐ ಈಶ್ವರಮಂಗಲ ಶಾಖೆಯ ಅಧ್ಯಕ್ಷ ಫಾರೂಕ್ ಟಿ.ಎ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸದಸ್ಯ ರಿಯಾಝ್ ಗೋಳಿತ್ತಡಿ, ರಶೀದ್, ವಾಖಿದ್, ಸಾದಿಕ್ ಉಪಸ್ಥಿತರಿದ್ದರು.
