ಕಾಣಿಯೂರು: ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಚೇತನ ಕಾರ್ಯಕ್ರಮ ಹಾಗೂ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಸೆ 8ರಂದು ಕಾಣಿಯೂರು ಸ. ಹಿ. ಪ್ರಾ. ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಣಿಯೂರು ಸ. ಹಿ. ಪ್ರಾ. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರ ಅನಿಲ ವಹಿಸಿದ್ದರು. ಕಾಣಿಯೂರು ಶ್ರೀ ಮಠದ ಮೆನೇಜರ್ ಶ್ರೀನಿಧಿ ಆಚಾರ್, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಉದ್ಯಮಿ ಕಾಣಿಯೂರು ರಾಶಿ ಕಾಂಪ್ಲೆಕ್ಸ್ ನ ಮಾಲಕರಾದ ಚಂದ್ರಶೇಖರ್ ಬರೆಪ್ಪಾಡಿ, ಕೊಡಿಯಾಲ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ. ಎಂ ಕಲ್ಪಡ, ಕಾಣಿಯೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ನಿವೃತ್ತ ಶಿಕ್ಷಕಿ ಯಮುನಾ ಗುಂಡಿಗದ್ದೆ, ಸಿ ಆರ್ ಪಿ ಯಶೋದಾ, ಸಿ.ಸಿ ಕನ್ಸ್ ಸ್ಟ್ರಕ್ಷನ್ ನ ಚೇತನ್ ಕಟ್ಟತ್ತಾರು, ಚಿಂತನ್, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಯಶೋದಾ ನೇರೋಳ್ತಡ್ಕ, ಶಾಲಾ ನಾಯಕಿ ಮನಸ್ವಿ, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಶಾಲಾ ಎಸ್ ಡಿ ಎಂ ಸಿ ಸದಸ್ಯೆ ಗೌರಿ ಮಾದೋಡಿ ಸ್ವಾಗತಿಸಿ, ಎಸ್ ಡಿ ಎಂ ಸಿ ಸದಸ್ಯ ದಿನೇಶ್ ಅನ್ಯಾಡಿ ವಂದಿಸಿದರು. ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ ಮತ್ತು ಕಣ್ವರ್ಷಿ ಮಹಿಳಾ ಮಂಡಲದ ಕಾರ್ಯದರ್ಶಿ ನಾಗವೇಣಿ ಬೆದ್ರಾಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಗುರುಭ್ಯೋ ನಮಃ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಿಕ್ಷಕರಿಗೆ ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರ ಮುಖ್ಯಗುರು ಬಾಲಕೃಷ್ಣ ಕೆ, ಶಿಕ್ಷಕಿಯರಾದ ಸುಜಯ, ಭಾರತಿ, ದೇವಕಿ , ವೀಕ್ಷಿತಾ, ಶೇರಿನ ಬೇಗಂ, ರಶ್ಮಿ ಆರ್, ದಿವ್ಯ , ಚೈತನ್ಯ, ನಯನಾ ಪ್ರಭು, ವಾಣಿಶ್ರೀ ಹಾಗೂ ಸಿ ಆರ್ ಪಿ ಯಶೋದಾರವರನ್ನು ಗೌರವಿಸಲಾಯಿತು.