ಪುತ್ತೂರು: ಪಾಪೆಮಜಲು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಸೆ.16ರಂದು ನಡೆಯಿತು.
ಸಂಘವು 2024-25ನೇ ಸಾಲಿನಲ್ಲಿ ನಿವ್ವಳ ಲಾಭವಾಗಿ ರೂ. 3,24,951 ಹೊಂದಿದ್ದು, ಸದಸ್ಯರಿಗೆ 14% ಡಿವಿಡೆಂಟ್ ಮತ್ತು ಪ್ರತಿ ಲೀಟರ್ ಹಾಲಿಗೆ ರೂ 1.27 ಬೋನಸ್ ನ್ನು ನೀಡುವುದೆಂದು ತೀರ್ಮಾನಿಸಲಾಯಿತು.

ಸಂಘಕ್ಕೆ ಕಟ್ಟಡ ಕಟ್ಟಲು ಸೂಕ್ತ ದರದಲ್ಲಿ ಜಾಗ ಒದಗಿಸಿದ ಅಮ್ಮಣ್ಣ ರೈ ಅವರನ್ನು ಅಭಿನಂದಿಸಲಾಯಿತು. ಸಂಘದ ನಿರ್ದೇಶಕರಾದ ದಿನೇಶ್ ಕುಮಾರ್ ಎಂ ಸ್ವಾಗತಿಸಿದರು. ನಿರ್ದೇಶಕರಾದ ಲೋಕೇಶ್ ಕೆ ವಂದಿಸಿದರು. ಕಾರ್ಯದರ್ಶಿ ರಮೇಶ್ ಎ ಸಹಕರಿಸಿದರು.
ಉಪಾಧ್ಯಕ್ಷರಾದ ವಿಶ್ವನಾಥ ಬಿ, ನಿರ್ದೇಶಕರಾದ ಸುನಿಲ್ ಕುಮಾರ್, ದೇವಪ್ಪ ನಾಯ್ಕ, ನಿತ್ಯ ಕುಮಾರಿ, ಭವಾನಿ ಎಂ., ಕಮಲಾಕ್ಷಿ, ಭಾರತಿ, ಮಾಜಿ ಅಧ್ಯಕ್ಷರಾದ ರಾಮ್ ಮೋಹನ್, ಗಣಪತಿ ಭಟ್ ಸಹಿತ ಹಲವರು ಉಪಸ್ಥಿತರಿದ್ದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿನಯ್ ಕುಮಾರ್ ಎಸ್ ನೂಚಿಲೋಡು ಸಭಾ ನಡವಳಿಕೆ ನಿರ್ವಹಿಸಿದರು. ಹಾಲು ಪರೀಕ್ಷರಾದ ಚೈತ್ರಾ ವರದಿ ವಾಚಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಮಾಲತಿ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ವಿವರ ನೀಡಿದರು ಮತ್ತು ಸದಸ್ಯರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.
ವರದಿ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿದ ರಮೇಶ್ ರೈ ಬಳ್ಳಿಕಾನ, ಸವಿತ ಬಿ ಆಲಂತಡ್ಕ, ಸುನಿಲ್ ಕುಮಾರ್ ಗುಂಡ್ಯಡ್ಕರನ್ನು ಸನ್ಮಾನಿಸಲಾಯಿತು. ಹಾಲು ಪೂರೈಸಿದ ಇತರ ಸದಸ್ಯರಿಗೆ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಿತು.
ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಜಯರಾಮ ಪಿ-ಜಯಲಕ್ಷ್ಮಿ ದಂಪತಿಗಳ ಪುತ್ರ ಆಕಾಶ್ ಪಿ.ಜೆ ವಿಜ್ಞಾನ ವಿಭಾಗ 588 ಅಂಕ, ಬೆಳಿಯಪ್ಪ ಗೌಡ- ಲಲಿತ ದಂಪತಿ ಪುತ್ರಿ ಪಲ್ಲವಿ ಕೆ.ಬಿ ವಿಜ್ಞಾನ ವಿಭಾಗ 583 ಅಂಕ, ಗಂಗಾಧರ ಗೌಡ-ನಿತ್ಯಕುಮಾರಿ ದಂಪತಿಗಳ ಪುತ್ರ ರಕ್ಷಕ್ ಬಿ ವಾಣಿಜ್ಯ ವಿಭಾಗ 511 ಅಂಕ, ವಸಂತ ಮಣಿಯಾಣಿ ಲತಾ ಕೆ ದಂಪತಿಗಳ ಪುತ್ರಿ ಶ್ರೀನಿಕ ವಿಜ್ಞಾನ ವಿಭಾಗ 485 ಅಂಕ, ನಿತ್ಯಾನಂದ ಮಣಿಯಾಣಿ ಸವಿತಾ ದಂಪತಿಗಳ ಪುತ್ರ ರಜಿತ್ ಕೆ. ಎನ್ ವಿಜ್ಞಾನ ವಿಭಾಗ 434 ಅಂಕ. ಪ್ರಭಾಕರ ಲೀಲಾವತಿ ದಂಪತಿಗಳ ಪುತ್ರಿ ನೀತಿ ಕೆ.ಪಿ ವಿಜ್ಞಾನ ವಿಭಾಗ 420 ಅಂಕ.
ವರದಿ ಸಾಲಿನಲ್ಲಿ ನಿಧನರಾದ ಸಂಘದ ಹಾಲು ಪರೀಕ್ಷಕರಾದ ದೇವಪ್ಪ ಗೌಡ ಆಲಂತಡ್ಕ ಅವರಿಗೆ ಮೌನ ಪ್ರಾರ್ಥನೆ ಮೂಲಕ ಸಂತಾಪ ಸೂಚಿಸಲಾಯಿತು.