ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಂಘದ ವತಿಯಿಂದ ಉಚಿತ ಸಾಮೂಹಿಕ ಜಂತು ಹುಳ ಔಷಧಿ ವಿತರಣಾ ಕಾರ್ಯಕ್ರಮಕ್ಕೆ ಸಂಘದ ಮುಖ್ಯ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ಉಪಾಧ್ಯಕ್ಷ ಚಂದ್ರಯ್ಯ ಆಚಾರ್ಯ ಅಬೀರ, ನಿರ್ದೇಶಕರಾದ ರಾಜೇಶ್ ಮುಂಡಾಳ, ಸುಂದರ ಬೆದ್ರಾಜೆ, ಮುರಳೀಧರ ಪುಣ್ಚತ್ತಾರು, ಭರತ್ ಅಗಳಿ, ಚೆನ್ನಕೇಶವ ಬೇಂಗಡ್ಕ, ಸದಾನಂದ ನಾವೂರು, ಸೌಮ್ಯ ಪೈಕ, ನೀಲಮ್ಮ ಬೇಂಗಡ್ಕ, ಕಾರ್ಯದರ್ಶಿ ಜಗದೀಶ್ ಗೌಡ, ಸಿಬ್ಬಂದಿಗಳಾದ ಚಂದ್ರಶೇಖರ, ಸೀತಾರಾಮ, ಪುಷ್ಪ ಉಪಸ್ಥಿತರಿದ್ದರು.