ನಿಡ್ಪಳ್ಳಿ: ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಪಾಣಾಜೆ ಇಲ್ಲಿಗೆ ರಾಕೇಶ್ ರೈ ಕಡಮಾಜೆ ಇವರು ಕೈಗೊಂಡ ಪರಿಕ್ರಮಣ ಸೈಕಲ್ ಅಭಿಯಾನದ ಯೋಜನೆ-2 ಇದರ ಅಂಗವಾಗಿ ಅರುಂದತಿ ಮತ್ತು ಅಶೋಕ್ ರಾವ್ ಅರೂರು ಅವರು ದೇಣಿಗೆಯಾಗಿ ನೀಡಿದ ಇನ್ವರ್ಟರ್ ಅನ್ನು ಸೆ.17 ರಂದು ಶಾಲೆಗೆ ಹಸ್ತಾಂತರಿಸಲಾಯಿತು.
ಡಾ. ಅಖಿಲೇಶ್ ಪಾಣಾಜೆ ಮತ್ತು ವಿಠ್ಠಲ ರೈ ಕಡಮಾಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಬಟ್ಯಮೂಲೆ, ಜಗನ್ನಾಥ ರೈ ಕಡಮಾಜೆ, ಶಂಕರ ರೈ ಬಾಳೆಮೂಲೆ, ಪ್ರಸಾದ ರೈ ಮುಂಗ್ಲಿಕಾನ, ಪ್ರೇಮರಾಜ್ ಆರ್ಲಪದವು, ವಸಂತ ಭರಣ್ಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಪ್ರೇಮ ಪಡ್ಯಂಬೆಟ್ಟು ಉಪಸ್ಥಿತರಿದ್ದರು. ಮುಖ್ಯಗುರು ಜನಾರ್ಧನ ಅಲ್ಚಾರು ಸ್ವಾಗತಿಸಿ, ವಂದಿಸಿದರು.
ಪುತ್ತಿಲ ಪರಿವಾರದ ಕಾರ್ಯಕರ್ತರು, ಎಸ್ ಡಿ ಎಂ.ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಸಹ ಶಿಕ್ಷಕರು ಭಾಗವಹಿಸಿದ್ದರು.