ಬೆಟ್ಟಂಪಾಡಿ ಶಾಲೆಗೆ ಕಲಿಕಾ ಉಪಕರಣಗಳ ಕೊಡುಗೆ ಹಸ್ತಾಂತರ

0

ನಿಡ್ಪಳ್ಳಿ: ದ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಬೆಟ್ಟಂಪಾಡಿ ಇಲ್ಲಿಗೆ ವಿದ್ಯಾಭಿಮಾನಿಗಳಾದ ಶಿಕ್ಷಕರ ಸಹಕಾರಿ ಬ್ಯಾಂಕ್ ಉಡುಪಿ ಇದರ ಸುಳ್ಯ ಶಾಖೆಯ ಮನೋಜ್ ರೈ ಸೂರಂಬೈಲು ಇವರು ಶಾಲೆಗೆ ನೀಡಿದ ಹಲವಾರು ವಿವಿಧ ಕಲಿಕೆಗೆ ಸಂಬಂಧ ಪಟ್ಟ ಉಪಕರಣ ಮತ್ತು ಆಟದ ಸಾಮಾಗ್ರಿಗಳನ್ನು ಸೆ.18 ರಂದು ಶಾಲೆಗೆ ಹಸ್ತಾಂತರಿಸಿದರು.

 ಬೆಟ್ಟಂಪಾಡಿ ಸಮೂಹ ಸಂಪನ್ಮೂಲ ವ್ಯಕ್ತಿ  ಪರಮೇಶ್ವರಿ ಪ್ರಸಾದ್, ಶಿಕ್ಷಕ ಉಸ್ಮಾನ್, ಶಾಲಾ ಹಿರಿಯ ವಿದ್ಯಾರ್ಥಿ ಜಗನ್ನಾಥ ರೈ ಕೊಮ್ಮಂಡ, ಹಾಜಿ ಮಹಮದ್ ಕುಕ್ಕುವಳ್ಳಿ, ಪ್ರಭಾಕರ್ ರೈ ಬಾಜುವಳ್ಳಿ, ಹಮೀದ್ ಕೊಮ್ಮೆಮಾರು, ಶೇಷನ್ ಪಾರ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸೌಮ್ಯಶ್ರೀ ವಿ,ಪ್ರಭಾರ ಮುಖ್ಯಗುರು ಮಮತಾ,ಅತಿಥಿ ಶಿಕ್ಷಕರು, ಗೌರವ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಸಲುವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ಶಾಲೆಯಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ  ತರಗತಿಯನ್ನು ಪ್ರಾರಂಭಿಸಲಾಗಿತ್ತು.

LEAVE A REPLY

Please enter your comment!
Please enter your name here