ತಾಲೂಕು ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

0

ಬಾಲಕರ ವಿಭಾಗದಲ್ಲಿ ಅತಿಥೇಯ ಉಪ್ಪಿನಂಗಡಿ ಪ್ರಥಮ
ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಪ್ರಥಮ

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಅತಿಥೇಯ ತಂಡವಾದ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ತಮ್ಮದಾಗಿಸಿಕೊಂಡರೇ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನ ತಂಡ ತಮ್ಮದಾಗಿಸಿಕೊಂಡಿತು.


ಬಾಲಕರ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ವಿವೇಕಾನಂದ ಕಾಲೇಜು ಪುತ್ತೂರು ಹಾಗೂ ಬಾಲಕಿಯರ ವಿಭಾಗದಲ್ಲಿ ಸೈಂಟ್ ಫಿಲೋಮಿನಾ ಕಾಲೇಜು ತಂಡವು ತಮ್ಮದಾಗಿಸಿಕೊಂಡಿದೆ. ಬಾಲಕರ ವಿಭಾದಲ್ಲಿ ಬೆಸ್ಟ್ ರೈಡರ್ ಆಗಿ ಪುತ್ತೂರು ವಿವೇಕಾನಂದ ಕಾಲೇಜಿನ ಜಿಶ್ಣು, ಬೆಸ್ಟ್ ಡಿಫೇಂಡರ್ ಆಗಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಮುಫೀದ್, ಬೆಸ್ಟ್ ಆಲ್‌ರೌಂಡರ್ ಆಗಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಹಜ್ಮಲ್ ಮೂಡಿಬಂದರು. ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ರೈಡರ್ ಆಗಿ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿಜ ಅತೀಕಾ, ಬೆಸ್ಟ್ ಡಿಫೆಂಡರ್ ಆಗಿ ಪುತ್ತೂರು ವಿವೇಕಾನಂದ ಕಾಲೇಜಿನ ರಕ್ಷಾ, ಬೆಸ್ಟ್ ಅಲ್ ರೌಂಡರ್ ಆಗಿ ಪುತ್ತೂರು ವಿವೇಕಾನಂದ ಕಾಲೇಜಿನ ವೀಕ್ಷಾ ಮೂಡಿಬಂದರು.


ವಿಜೇತ ತಂಡಗಳಿಗೆ ಸಮಾರೋಪ ಸಮಾರಂಭದಲ್ಲಿ ಟ್ರೋಫಿಗಳನ್ನು ನೀಡಲಾಯಿತು. ಈ ಸಂದರ್ಭ ಉದ್ಯಮಿ ಸಿದ್ದೀಕ್ ಕೆಂಪಿ, ಕಾಲೇಜಿನ ಪ್ರಾಂಶುಪಾಲ ಇಬ್ರಾಹೀಂ ಎಂ., ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕ್ಕಾರ್, ಸದಸ್ಯರಾದ ಅಬ್ದುರ್ರಹ್ಮಾನ್ ಮಠ, ಚಂದ್ರಹಾಸ ಶೆಟ್ಟಿ, ಅನಿ ಮಿನೇಜಸ್, ಜಾನ್ ಕೆನ್ಯೂಟ್ ಮಸ್ಕರೇನಸ್, ಡಾ. ನಿರಂಜನ ರೈ, ನಜೀರ್ ಮಠ, ಅಬ್ದುಲ್ ರಹಿಮಾನ್ ಯುನಿಕ್, ವೆಂಕಪ್ಪ ಪೂಜಾರಿ, ನಾಗೇಶ್ ಪ್ರಭು, ಆದಂ ಕೊಪ್ಪಳ, ಇಬ್ರಾಹೀಂ ಯು.ಕೆ., ಮೋನಪ್ಪ ಪೂಜಾರಿ ಡೆಂಬಳೆ, ಅರಫಾ ಶರೀಕ್, ಅಬ್ದುಲ್ ಮಜೀದ್ ಯು.ಎಂ. ಮಠ, ಸಣ್ಣಣ್ಣ ಮಡಿವಾಳ, ಶ್ರೀಮತಿ ಉಷಾ ಎ.ಎಸ್., ಕಬಡ್ಡಿ ತರಬೇತುದಾರ ಆಸೀಫ್ ತಂಬುತ್ತಡ್ಕ, ಉಪನ್ಯಾಸಕರು ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಇಡೀ ಪಂದ್ಯಾಟದ ವೀಕ್ಷಕ ವಿವರಣೆಯನ್ನು ಕಾಲೇಜಿನ ಹಿರಿಯ ಸಂದೇಶ ಕೆ. ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here