ಪುತ್ತೂರು ತಾ| ಬಂಟರ ಸಂಘದ ಕಾರ್‍ಯಕಾರಿ ಸಮಿತಿ ಸಭೆ

0

ನವೆಂಬರ್ ತಿಂಗಳ ಪ್ರಥಮ ವಾರ 13 ಮಂದಿ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರಧಾನ

ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ನವೆಂಬರ್ ತಿಂಗಳ ಪ್ರಥಮ ವಾರ ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ 13 ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಂಟ ಸಮಾಜ ಭಾಂದವರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಅವರು ಸೆ. 16 ರಂದು ತಾಲೂಕು ಬಂಟರ ಸಂಘದ ಕಾರ್‍ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ಈ ಬಾರಿ ಚಿನ್ನದ ಪದಕ ಪ್ರಶಸ್ತಿ ವಿಜೇತರನ್ನು ದರ್ಬೆಯಿಂದ ಪುತ್ತೂರು ಪೇಟೆ ಮೂಲಕ ಬಂಟರ ಭವನದ ತನಕ ಅದ್ದೂರಿಯಾಗಿ ವಾಹನದ ಮೂಲಕ ಮೆರವಣಿಯಲ್ಲಿ ಕರೆತರಲಾಗುವುದು ಎಂದರು.

ಬಂಟರ ಸಂಘಕ್ಕೆ ಮಂಜೂರಾದ ಐದುವರೆ ಎಕ್ರೆ ಜಾಗ
ತಾಲೂಕು ಬಂಟರ ಸಂಘಕ್ಕೆ ಮರೀಲಿನಲ್ಲಿ ಮಂಜೂರಾಗಿರುವ ಜಾಗದಲ್ಲಿ ಇರುವ ಪೊದೆ, ಗಿಡ ಬಳ್ಳಿಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದ್ದು, ಅಕ್ಟೋಬರ್ ತಿಂಗಳ ಪ್ರಥಮ ವಾರ ಈ ಕಾರ್‍ಯ ಪೂರ್ಣಗೊಳ್ಳಲಿದ್ದು, ಆ ಬಳಿಕ ಆ ಜಾಗದಲ್ಲಿ ಬಂಟ ಸಮಾಜ ಭಾಂದವರನ್ನು ಸೇರಿಸಿ, ಸಭೆಯೊಂದನ್ನು ಮಾಡಲಿದ್ದೇವೆ. ನಮಗೆ ಈಗಾಗಲೇ ಐದುವರೆ ಎಕ್ರೆ ಜಾಗ ದೊರೆತಿದ್ದು, ಈ ಜಾಗದಲ್ಲಿ ಸುಂದರವಾದ ವಿಶಾಲವಾದ ಸಭಾಭವನವೊಂದನ್ನು ನಿರ್ಮಿಸಲಾಗುವುದು. ಅ ಬಳಿಕ ಬೇರೆ ಬೇರೆ ಯೋಜನೆಗಳು ಇದೆ ಎಂದು ಹೇಮನಾಥ ಶೆಟ್ಟಿ ಹೇಳಿದರು.


ಸ್ಥಳಕ್ಕೆ ಐದು ದಾರಿ
ಪುತ್ತೂರು ಪೇಟೆಯಿಂದ ಬಂಟರ ಸಂಘದ ನೂತನ ಜಾಗಕ್ಕೆ ಹೋಗಲು ಐದು ದಾರಿಗಳ ವ್ಯವಸ್ಥೆ ಆಗಲಿದ್ದು, ಒಟ್ಟಿನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ವಾಹನ ಸಂಚಾರಕ್ಕೆ ಯೋಗ್ಯವಾದ ದಾರಿ ವ್ಯವಸ್ಥೆಯಿಂದ ಕೂಡಿದ ನೂತನ ಜಾಗದಲ್ಲಿ ಸಭಾಭವನ ಶ್ರೀಘ್ರವಾಗಿ ನಿರ್ಮಾಣವಾಗಲಿದೆ ಎಂದು ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.ಸಭೆಯಲ್ಲಿ ಬಂಟೆರೆ ಕೆಸರ್ ಒಂಜಿ ಕುಸಲ್ ಕಾರ್‍ಯಕ್ರಮದ ಖರ್ಚು ವೆಚ್ಚಗಳ ಮಂಡನೆ ಮಾಡಲಾಯಿತು.


ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಉಪಸ್ಥಿತರಿದ್ದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ ವಂದಿಸಿದರು.ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಜೊತೆ ಕಾರ್‍ಯದರ್ಶಿ ಪುಲ್ಯಸ್ಯ್ತ ರೈ, ಹರಿಣಾಕ್ಷಿ ಜೆ.ಶೆಟ್ಟಿ ಹಾಗೂ ನಿರ್ದೇಶಕರುಗಳು, ವಿಶೇಷ ಆಹ್ವಾನಿತರರು ಉಪಸ್ಥಿತರಿದ್ದರು.

ಗೌರವಾರ್ಪಣೆ
ಕೈಕಾರದಲ್ಲಿ ಬಂಟರ ಸಂಘದ ವತಿಯಿಂದ ನಡೆದ ಕೆಸರ್‌ಡೊಂಜಿ ಕುಸಲ್ ಕಾರ್‍ಯಕ್ರಮದ ಯಶಸ್ಸಿಗೆ ಸಹಕರಿಸಿದ ಸೀತಾರಾಮ ರೈ ಕೈಕಾರ, ಪ್ರಜ್ವಲ್ ರೈ ತೊಟ್ಲ, ಮನ್ಮಥ ಶೆಟ್ಟಿ, ತಾಲೂಕು ಬಂಟರ ಸಂಘದ ಅಧ್ಯಕ್ಷೆ ಗೀತಾಮೋಹನ್ ರೈ, ಕಾರ್‍ಯದರ್ಶಿ ಕುಸುಮಾ ಶೆಟ್ಟಿ, ತಾಲೂಕು ಬಂಟರ ಸಂಘ ನಿರ್ದೇಶಕ ಶಶಿಕಿರಣ್ ರೈ ನೂಜಿಬೈಲು, ಬಂಟರ ಸಂಘದ ಕಚೇರಿ ವ್ಯವಸ್ಥಾಪಕಿ ರಂಜಿನಿ ಶೆಟ್ಟಿ, ಬಂಟರ ಭವನದ ಕಚೇರಿ ವ್ಯವಸ್ಥಾಪಕ ರವಿಚಂದ್ರ ರೈ ಕುಂಬ್ರ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತರಾದ ಯಶುಭ ರೈ ಮತ್ತು ಮಲ್ಲಿಕಾ ಜೆ.ರೈಯರವನ್ನು ತಾಲೂಕು ಬಂಟರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಶಾಲು ಹಾಕಿ ಗೌರವಿಸಿದರು. ಈ ಸಂದರ್ಭದಲ್ಲಿ ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈ, ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು ಹಾಗೂ ರವೀಂದ್ರ ಶೆಟ್ಟಿ ನುಳಿಯಾಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here