ಕೆಯ್ಯೂರು ಗ್ರಾಪಂನಿಂದ ಮಾದರಿಯಾದ ಸ್ವಚ್ಛತಾ ಶ್ರಮದಾನ
ಪುತ್ತೂರು: ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಚರಣೆಯ ಪ್ರಯುಕ್ತ ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆ.17 ರಂದು ಸ್ವಚ್ಚತಾ ಶ್ರಮದಾನ ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೋಷನಗರ ಪ್ರಯಾಣಿಕರ ತಂಗುದಾಣ, ಮಾಡಾವುಕಟ್ಟೆ ಪ್ರಯಾಣಿಕರ ತಂಗುದಾಣ, ಕೆಪಿಎಸ್ ಶಾಲಾಬಳಿಯ ಪ್ರಯಾಣಿಕರ ತಂಗುದಾಣ ,ಕಟ್ಟತ್ತಾರು ಪ್ರಯಾಣಿಕರ ತಂಗುದಾಣ, ಮತ್ತು ಮಾಡಾವು ಮಲೆ ಎಂಬಲ್ಲಿರುವ ಪ್ರಯಾಣಿಕರ ತಂಗುದಾಣ, ದೇವೀನಗರ ಎಂಬಲ್ಲಿರುವ 2 ಪ್ರಯಾಣಿಕರ ತಂಗುದಾಣ ಸೇರಿದಂತೆ ಒಟ್ಟು 7 ಪ್ರಯಾಣಿಕರ ತಂಗುದಾಣಗಳನ್ನು ಹಾಗೆಯೇ ಗ್ರಾಮ ಪಂಚಾಯತ್ ಕಛೇರಿ ಬಳಿ, ಕಟ್ಟತ್ತಾರು ಅಂಗನವಾಡಿ ಬಳಿ, ಬೊಳಿಕ್ಕಲ ಅಂಗನವಾಡಿ ಬಳಿ, ಮತ್ತು ಘನತ್ಯಾಜ್ಯ ಘಟಕದ ಬಳಿ ಸ್ವಚ್ಚಗೊಳಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷೆ ಸುಮಿತ್ರ ಪಲ್ಲತ್ತಡ್ಕ , ಸದಸ್ಯರುಗಳಾದ ವಿಜಯ ಕುಮಾರ್ ಸಣಂಗಲ, ಮೀನಾಕ್ಷಿ ವಿ ರೈ, ಸುಭಾಷಿಣಿ, ಜಯಂತಿ ಎಸ್.ಭಂಡಾರಿ, ಮಮತಾ ರೈ, ಜಯಂತ ಪೂಜಾರಿ ಕೆಂಗುಡೇಲು, ಮಾಜಿ ಅಧ್ಯಕ್ಷ ಬಾಬು ಬಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ , ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಪಂಚಾಯತ್‌ನ ಎಲ್ಲಾ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಎಲ್ಲಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪೆರುವಾಜೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
‘ ಸ್ವಚ್ಛತೆಯೇ ಸೇವೆ 2025 ಕಾರ್ಯಕ್ರಮದಡಿ ಕೆಯ್ಯೂರು ಗ್ರಾಪಂನಿಂದ ವಿಶೇಷ ರೀತಿಯಲ್ಲಿ ಸ್ವಚ್ಚತಾ ಶ್ರಮದಾನ ನಡೆಯುತ್ತಿದ್ದು ಈಗಾಗಲೇ ಗ್ರಾಮದಲ್ಲಿರುವ 7 ಪ್ರಯಾಣಿಕರ ಬಸ್ಸು ತಂಗುದಾಣವನ್ನು ಸಂಪೂರ್ಣ ಸ್ವಚ್ಛತೆ ಮಾಡಲಾಗಿದೆ. ಉಳಿದಂತೆ ಗ್ರಾಮದ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಶ್ರಮದಾನವನ್ನು ಸರ್ವರ ಸಹಕಾರದೊಂದಿಗೆ ಮಾಡಲಾಗುತ್ತಿದೆ. ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳಲ್ಲಿ ಸಲ್ಲಿಸುತ್ತೇವೆ.’
ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ