ಒಳಮೊಗ್ರು ಗ್ರಾಪಂನಿಂದ ಅಜಲಡ್ಕದಲ್ಲಿ ಗಿಡ ನೆಡುವ ಮೂಲಕ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮದಡಿಯಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆ.17 ರಿಂದ ಆರಂಭಗೊಂಡ ಸ್ವಚ್ಚತಾ ಶ್ರಮದಾನ ಕಾರ್ಯಕ್ರಮವು ನಿರಂತರವಾಗಿ ನಡೆಯುತ್ತಿದ್ದು ಸೆ.25 ರಂದು ಗ್ರಾಮದ ಅಜಲಡ್ಕದಲ್ಲಿ ನಡೆಯಿತು.

ಅಜಲಡ್ಕ ಅಂಗವಾಡಿ ಸುತ್ತಮುತ್ತ ಸ್ವಚ್ಛತೆ ನಡೆಸಲಾಯಿತು.ವಿಶೇಷವಾಗಿ ಅಂಗನವಾಡಿ ಸುತ್ತ ಗಿಡ ನೆಡುವ ಮೂಲಕ ಸ್ವಚ್ಚತಾ ಶ್ರಮದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಅನುಗ್ರಹ ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ಸೇರಿದಂತೆ ಒಕ್ಕೂಟದ ಸದಸ್ಯರುಗಳು, ಗ್ರಾಪಂ ಮಾಜಿ ಸದಸ್ಯರು, ಅಜಲಡ್ಕ ಮಹಿಳಾ ಸಂಘದ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಗ್ರಾಪಂ ಸ್ವಚ್ಚತಾ ಸೇನಾನಿಗಳು, ಸಿಬ್ಬಂದಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here