ಪುತ್ತೂರು: ಮಹಿಳೆಯರ ಅಲಂಕಾರಿಕ ಶೈಲಿಯನ್ನು ವರ್ದಿಸುವ ಸ್ಟೈಲ್ ಸ್ಟುಡಿಯೋ ಸೆ.29ರಂದು ಪುತ್ತೂರು ಮುಖ್ಯರಸ್ತೆಯ ಬೊಳುವಾರು ಪ್ರಗತಿ ಆಸ್ಪತ್ರೆಯ ಮುಂಭಾಗದ ಹಿರಣ್ಯ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಬೆಳಿಗ್ಗೆ ಎಸ್.ಯೋಗೇಶ್ ಕಲ್ಲೂರಾಯರವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ, ಲಕ್ಷ್ಮೀಪೂಜೆ ನಡೆಯಲಿದೆ. ಬಳಿಕ ದೀಪ ಪ್ರಜ್ವಲನೆಯ ಮೂಲಕ ಸಂಸ್ಥೆ ಶುಭಾರಂಭಗೊಳ್ಳಲಿದೆ.
ನೂತನ ಸಂಸ್ಥೆಯಲ್ಲಿ ಮಹಿಳೆಯರ ವಿವಿಧ ವಿನ್ಯಾಸಗಳನ್ನೊಳಗೊಂಡ ಟೈಲರಿಂಗ್, ಬ್ಯಾಗ್ಸ್ ಲೇಡೀಸ್’ವೇರ್, ವಿಶಿಷ್ಟ ವಿನ್ಯಾಸದ ಆಭರಣಗಳು, ಮಹಿಳೆಯರ ಶೈಲಿಗೆ ತಕ್ಕ ರೆಂಟಲ್ ಆಂಡ್ ಸೇಲ್ಸ್ ಜ್ಯುವೆಲ್ಲರಿ, ಖರೀದಿ ಹಾಗೂ ಬಾಡಿಗೆಗೆ ಲಭ್ಯವಿದೆ.
ಅಲ್ಲದೆ ಸರಿಯಾದ ಅಳತೆಯಲಿ ಮನಸಿಗೊಪ್ಪುವಂತೆ ಡಿಸೈನರ್ ಬ್ಲೌಸ್ ಗಳು, ಮದುಮಗಳಿಗೆ ಬೇಕಾದ ಮತ್ತು ಪಾರ್ಟಿಯಲ್ಲಿ ಧರಿಸುವ ಗೌನ್’ಗಳ ಸ್ಟಿಚ್, ಲೆಹೆಂಗಾ ಸ್ಟಿಚ್, ಡ್ರೆಸ್ ಅಲ್ಟ್ರೇಷನ್ ಮತ್ತು ರಿ ಸ್ಟೈಲ್ ಮಾಡಿಕೊಡಲಾಗುವುದು. ಶುಭಾರಂಭ ಪ್ರಯುಕ್ತ ಗ್ರಾಹಕರಿಗೆ ಅ.20ರವರೆಗೆ 30% ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಮೋನಿಷ ಕಂಪ ಹಾಗೂ ವನಿತಾ ಬೊಳ್ಳಾಡಿ ತಿಳಿಸಿದ್ದಾರೆ.