
ಬಡಗನ್ನೂರು : ಸ್ವಚ್ಛತಾ ಹೀ ಸೇವಾ ಸ್ವಚ್ಛತೆಯೇ ಸೇವಾ ಪಾಕ್ಷಿಕ 2025 ಅಭಿಯಾನದ ಅಂಗವಾಗಿ ಸೆ. 26 ರಂದು ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಟ್ಟೆ ಮತ್ತು ಪೇರಿಗೇರಿ ಬಸ್ಸು ತಂಗುದಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಶ್ರಮದಾನ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಸದಸ್ಯರಾದ ಸಂತೋಷ ಆಳ್ವ ಗಿರಿಮನೆ, ವೆಂಕಟೇಶ್ ಕನ್ನಡ್ಕ, ಕುಮಾರ ಅಂಬಟೆಮೂಲೆ, ಧರ್ಮೇಂದ್ರ ಕುಲಾಲ್ ಪದಡ್ಕ, ದಮಯಂತಿ ಕೆಮನಡ್ಕ, ವಸಂತ ಗೌಡ ಪೆರಿಗೇರಿ, ಪಟ್ಟೆ ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನಾ ಬಿ, ಸಹ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ, ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಬಿ.ಕೆ ಸುಬ್ಬಯ್ಯ, ಗ್ರಾ. ಪಂ ಸಿಬ್ಬಂದಿ ವರ್ಗದವರು ಆರೋಗ್ಯ ಕಾರ್ಯಕರ್ತರು, ಆಶಾಕಾರ್ಯಕರ್ತೆಯರು, ಶಾಲಾ ಶಿಕ್ಷಕ ಶಿಕ್ಷಕಿಯರು ಶಾಲಾ ಮಕ್ಕಳು ಹಾಗೂ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಹಾಗೂ ಸಿಬಂದಿಗಳು, ಅಟೋ ರಿಕ್ಷಾ ಚಾಲಕರು ಮತ್ತು ಊರಿನವರು ಭಾಗವಹಿಸಿದ್ದರು.