ಬೊಳುವಾರಿನಲ್ಲಿ ಸ್ಟೈಲ್ ಸ್ಟುಡಿಯೋ ಶುಭಾರಂಭ

0

ಪುತ್ತೂರು: ಮಹಿಳೆಯರ ಅಲಂಕಾರಿಕ ಶೈಲಿಯನ್ನು ವರ್ದಿಸುವ ಸ್ಟೈಲ್ ಸ್ಟುಡಿಯೋ ಸೆ.೨೯ರಂದು ಪುತ್ತೂರು ಮುಖ್ಯರಸ್ತೆಯ ಬೊಳುವಾರು ಪ್ರಗತಿ ಆಸ್ಪತ್ರೆಯ ಮುಂಭಾಗದ ಹಿರಣ್ಯ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.


ಬೆಳಿಗ್ಗೆ ಎಸ್.ಯೋಗೇಶ್ ಕಲ್ಲೂರಾಯರವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ, ಲಕ್ಷ್ಮೀಪೂಜೆ ನಡೆಯಿತು. ಮಾಲಕಿ ವನಿತಾರವರ ತಂದೆ ಮೋಹನ್ ಕುಮಾರ್ ಬೊಳ್ಳಾಡಿ, ತಾಯಿ ರಾಜೀವಿ ಬೊಳ್ಳಾಡಿ ಹಾಗೂ ಮೋನಿಷಾರವರ ತಾಯಿ ಶೈಲಜಾ ಕೆ,ಕಂಪ ದೀಪ ಬೆಳಗಿಸಿ ಮಳಿಗೆ ಉದ್ಘಾಟಿಸಿ‌‌ ಶುಭ ಹಾರೈಸಿದರು.


ಗಣೇಶ್ ಮೆಡಿಕಲ್ಸ್ ನ ಮಾಲಕರಾದ ಗಣೇಶ್ ಭಟ್, ಅರುಣಾ ಜಿ.ಭಟ್, ಕಟ್ಟಡ ಮಾಲಕಕರು ಸೇರಿದಂತೆ ಹಲವಾರು ಗಣ್ಯರು, ಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ಸಂಸ್ಥೆಯ ಮಾಲಕರಾದ ಮೋನಿಷ ಕಂಪ ಹಾಗೂ ವನಿತಾ ಬೊಳ್ಳಾಡಿ, ಮೋನಿಷರವರ ಅತ್ತೆ ರಾಜಮ್ಮ, ಪತಿ ಸಂದೇಶ್ ಎಚ್, ಪುತ್ರಿ ಶುದ್ಧಿ ಎಸ್, ನಾದಿನಿ ಅಮೃತ್ ದೀಪಕ್ ಹಾಗೂ ವನಿತಾರವರ ಅತ‌್ತೆ ವಿಲಾಸಿನಿ ಸುಂದರ ಗೌಡ, ಪತಿ ಕಿರಣ್ ಪುತ್ತೂರು, ಪುತ್ರಿ ವೈಶ್ವಿ ಕಿರಣ್ ಉಪಸ್ಥಿತರಿದ್ದರು.


ನೂತನ ಸಂಸ್ಥೆಯಲ್ಲಿ ಮಹಿಳೆಯರ ವಿವಿಧ ವಿನ್ಯಾಸಗಳನ್ನೊಳಗೊಂಡ ಟೈಲರಿಂಗ್, ಬ್ಯಾಗ್ಸ್, ಲೇಡೀಸ್’ವೇರ್, ವಿಶಿಷ್ಟ ವಿನ್ಯಾಸದ ಆಭರಣಗಳು, ಮಹಿಳೆಯರ ಶೈಲಿಗೆ ತಕ್ಕ ರೆಂಟಲ್ ಆಂಡ್ ಸೇಲ್ಸ್ ಜ್ಯುವೆಲ್ಲರಿ, ಖರೀದಿ ಹಾಗೂ ಬಾಡಿಗೆಗೆ ಲಭ್ಯವಿದೆ. ಅಲ್ಲದೆ ಸರಿಯಾದ ಅಳತೆಯಲಿ ಮನಸಿಗೊಪ್ಪುಂತ ಡಿಸೈನರ್ ಬ್ಲೌಸ್ ಗಳು, ಮದುಮಗಳಿಗೆ ಬೇಕಾದ ಸ್ಟಿಚ್, ಲೆಹೆಂಗಾ ಸ್ಟಿಚ್, ಡ್ರೆಸ್ ಅಲ್ಟ್ರೇಷನ್ ಮತ್ತು ರಿ ಸ್ಟೈಲ್ ಮಾಡಿಕೊಡಲಾಗುವುದು. ಮಳಿಗೆ ಶುಭಾರಂಭ‌ದ ಪ್ರಯುಕ್ತ ಗ್ರಾಹಕರಿಗೆ ಅ.20ರವರೆಗೆ 30% ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುವುದು.
ಮೋನಿಷ ಕಂಪ ಹಾಗೂ ವನಿತಾ ಬೊಳ್ಳಾಡಿ
-ಮಾಲಕರು

LEAVE A REPLY

Please enter your comment!
Please enter your name here