ಕಲ್ಪಡ ಕೊಡಿಯಾಲ ಸ್ನೇಹಿತರ ಬಳಗದ 9ನೇ ವರ್ಷದ ಕ್ರೀಡಾಕೂಟದ ಆಮಂತ್ರಣ ಬಿಡುಗಡೆ

0

ಕಾಣಿಯೂರು: ಸ್ನೇಹಿತರ ಬಳಗ ಕಲ್ಪಡ ಕೊಡಿಯಾಲ ಇದರ ವತಿಯಿಂದ ಅ 26ರಂದು ನಡೆಯಲಿರುವ 9ನೇ ವರ್ಷದ ಸಾಮೂಹಿಕ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಶ್ರೀ ಉಲ್ಲಾಕುಲು ದೈವಸ್ಥಾನ ಕಲ್ಪಡ ಮಾಲ್ಯಾತ್ತರು ಇಲ್ಲಿ ಶ್ರೀ ಉಳ್ಳಾಕುಲು ಆಡಳಿತ ಮೊಕ್ತೇಸರರು ಮತ್ತು ಸ್ನೇಹಿತರ ಬಳಗದ ಗೌರವಧ್ಯಕ್ಷರಾದ ಶಿವರಾಮ ಉಪಾಧ್ಯಾಯ ಇವರ ನೇತೃತ್ವದಲ್ಲಿ ಬಿಡುಗಡೆ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸ್ನೇಹಿತರ ಬಳಗದ ಅಧ್ಯಕ್ಷ ಸುರೇಶ್ ಗುತ್ತು, ಉಳ್ಳಾಕುಲು ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಕೆ ಎಮ್, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ ಟಿ ಹಾಗೂ ಸ್ನೇಹಿತರ ಬಳಗ ಕಲ್ಪಡ ಕೊಡಿಯಾಲ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here