ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸಂಪನ್ನ

0

ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸೆ.30ರಂದು ಸಂಪನ್ನಗೊಂಡಿತು.

ಕ್ಷೇತ್ರದಲ್ಲಿ ಪ್ರಥಮ ದಿನ ಗಣಪತಿ ದೇವರಿಗೆ ಗಣಹೋಮ ಅಮ್ಮನವರಿಗೆ ನವಕ ಕಲಶಾಭಿಷೇಕ ನಾಗದೇವರಿಗೆ ಪೂಜೆಯ ನಂತರ ನವರಾತ್ರಿ ಮಹೋತ್ಸವ ಪ್ರಾರಂಭವಾಯಿತು. ರಾಜರಾಜೇಶ್ವರಿ ಅಮ್ಮನವರು 9 ದಿನಗಳಲ್ಲಿ ಬೇರೆ ಬೇರೆ ಅಲಂಕಾರದಲ್ಲಿ ಭಕ್ತರಿಗೆ ದರ್ಶನವನ್ನು ನೀಡಿದರು. ದಿನಂಪ್ರತಿ ಅನ್ನದಾನ ಸೇವೆ ನಡೆಯಿತು. ಕ್ಷೇತ್ರದ ಪೂರ್ವ ಶಿಷ್ಟಾಚಾರದಂತೆ ಪ್ರಥಮ ದಿನ ಕ್ಷೇತ್ರದಿಂದಲೇ ರಂಗ ಪೂಜೆ ನಡೆಯಿತು. ನಂತರ ಭಕ್ತಾದಿಗಳ ಸೇವಾ ರೂಪದಲ್ಲಿ ರಂಗಪೂಜೆ ನಡೆಯಿತು. 9 ದಿನವೂ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಿತು. ದಿನಂಪ್ರತಿ ಅಮ್ಮನವರಿಗೆ ಉಳಿಸಿದ ಸೀರೆಯನ್ನು ನವರಾತ್ರಿ ಪೂಜೆ ಮಾಡಿದ ಭಕ್ತರ ಹೆಸರನ್ನು ಚೀಟಿಯಲ್ಲಿ ಹಾಕಿ ಅದರಲ್ಲಿ ಒಂದು ಚೀಟಿಯನ್ನು ತೆಗೆದು ಆ ಚೀಟಿಯಲ್ಲಿ ಬಂದ ಹೆಸರಿನವರಿಗೆ ಆ ದೇವರ ಸೀರೆಯನ್ನು ಅಮ್ಮನವರ ಪ್ರಸಾದ ರೂಪದಲ್ಲಿ 9 ದಿನವೂ ವಿತರಿಸಲಾಯಿತು.

ಆ.30ರಂದು ಸಂಜೆ ಕ್ಷೇತ್ರದ ಪರಿವಾರ ದೈವಗಳಿಗೆ ತಂಬಿಲ ಸೇವೆ ಮತ್ತು ರಾತ್ರಿ ಅಮ್ಮನವರಿಗೆ ರಂಗಪೂಜೆ ಮಹಾಪೂಜೆಯೊಂದಿಗೆ ಉತ್ಸವ ಸಂಪನ್ನಗೊಂಡಿತು. ಕ್ಷೇತ್ರಕ್ಕೆ ಹಲವಾರು ಗಣ್ಯ ವ್ಯಕ್ತಿಗಳು ಆಗಮಿಸಿ ಅಮ್ಮನವರ ದರ್ಶನ ಪಡೆದರು. ಭಕ್ತಾದಿಗಳು ಹರಕೆ ರೂಪದಲ್ಲಿ ಗಂಟೆ, ಕಾಲದೀಪ, ಆರತಿ, ಹರಿವಾಣಗಳನ್ನು ಸಮರ್ಪಿಸಿದರು.

LEAVE A REPLY

Please enter your comment!
Please enter your name here