ಪಾಪೆಮಜಲು ಪ್ರೌಢಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

0

ಪುತ್ತೂರು: ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ ನಡೆಯಿತು.


ಮಹಾತ್ಮ ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ಹಾಗೂ ರಘುಪತಿ ರಾಘವ ರಾಜಾರಾಮ್ ಹಾಡನ್ನು ಹಾಡಿದರು. ಶಾಲಾ ಮುಖ್ಯ ಗುರು ಮೋನಪ್ಪ ಬಿ ಪೂಜಾರಿ ದಿನದ ಮಹತ್ವವನ್ನು ತಿಳಿಸುವುದರೊಂದಿಗೆ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರಲ್ಲಿದ್ಧ ಮಾನವೀಯ ಗುಣಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪುತ್ತೂರು ತಾಲೂಕು ಮಟ್ಟದ 14 ಮತ್ತು 17ರ ವಯೋಮಾನದ ಬಾಲಕಿಯರ ವಾಲಿಬಾಲ್ ತಂಡವನ್ನು ಪ್ರತಿನಿಧಿಸುವ ವಿದ್ಯಾರ್ಥಿನಿಯರಿಗೆ ನಿಶು ಸ್ಟುಡಿಯೋದ ಮಾಲಕ ನವೀನ್, ನಿವೃತ್ತ ಶಿಕ್ಷಕ ಮೇಬಲ್ ಡಿಸೋಜಾ ಹಾಗೂ ಲೋಕೇಶ್ ರೈ ಅಮೈ ಅವರು ಒದಗಿಸಿದ ಕ್ರೀಡಾ ಸಮವಸ್ತ್ರವನ್ನು ವಿತರಿಸಲಾಯಿತು. ದಾನಿ ನಿಶು ಸ್ಟುಡಿಯೋದ ಮಾಲಕ ನವೀನ್ ಉಪಸ್ಥಿತರಿದ್ದು ಸಮವಸ್ತ್ರ ವಿತರಣಾ ಕಾರ್ಯಕ್ರಮ ನೆರವೇರಿಸಿದರು. ವೇದಿಕೆಯಲ್ಲಿ ದಾನಿಗಳಾದ ರಮೇಶ್ ಪರ್ಪುಂಜ, ಸಂಸ್ಥೆಯ ಹಿರಿಯ ಶಿಕ್ಷಕಿ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಸದಸ್ಯರಾದ ಹೊನ್ನಪ್ಪ ನಾಯ್ಕ, ರೇವತಿ ಹಾಗೂ ಲೀಲಾವತಿ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣಾ ರೈ ಬಿ ಸಮವಸ್ತ್ರದ ದಾನಿಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಸವಿತಾ ಪಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಪ್ರೀತ ಟಿ ಎಂ, ಹರಿಪ್ರಸಾದ್ ಕೆ, ಶಾಲೆಟ್ ಜೇನ್ ರೆಬೆಲ್ಲೊ ಹಾಗೂ ಹರಿಣಾಕ್ಷಿ ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here