ಯುವವಾಹಿನಿ ಉಪ್ಪಿನಂಗಡಿ ಘಟಕದಿಂದ  ಫಲಾನುಭವಿಗಳಿಗೆ ನೆರವು

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಉಪ್ಪಿನಂಗಡಿ ಆಸುಪಾಸಿನ 5 ಆಶಕ್ತ ಫಲಾನುಭವಿ  ಕುಟುಂಬಗಳಿಗೆ ಒಟ್ಟು ರೂ.15000 ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ಘಟಕದ ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಇವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಾನಿಗಳಾದ ವರದರಾಜ್ ಎಂ, ನಟೇಶ್ ಪೂಜಾರಿ, ಕರುಣಾಕರ ಅಗ್ನಾಡಿ, ಯಶೋಧಾ ಗಂಗಾಧರ್, ಹರೀಶ್ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಥಮ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ನಿಕಟಪೂರ್ವ ಅಧ್ಯಕ್ಷರಾದ ಸೋಮಸುಂದರ ಕೊಡಿಪಾನ, ತಣ್ಣೀರುಪಂತ  ಸಿಎ ಬ್ಯಾಂಕಿನ ಅಧ್ಯಕ್ಷರಾದ ಜಯಾನಂದ ಕಲ್ಲಾಪು, ಮಾಜಿ ಅಧ್ಯಕ್ಷರಾದ ಗುಣಕರ  ಆಗ್ನಾಡಿ, ಚಂದ್ರಶೇಖರ ಸನಿಲ್, ಮನೋಹರ್ ಕುಮಾರ್ ಘಟಕದ ಉಪಾಧ್ಯಕ್ಷರಾದ ಅಂಕಿತ್ ಎಂ ಜೆ, ನ್ಯಾಯವಾದಿ ರಮೇಶ್ ನೆಜಿಕಾರು, ಮನೋಜ್ ಸಾಲ್ಯಾನ್ ಸುಣ್ಣಾಜೆ, ಯತೀಶ್ ಆರ್ ವಿ, ರಾಜೀವ ಕೋಟ್ಯಾನ್,  ಬೊಮ್ಮಯ ಬಂಗೇರ, ಉಮಾನಾಥ ಕೋಟ್ಯಾನ್, ಮಮತಾ ಆಲಾಜೆ, ಜಯಂತ ತಾರಿಪಡ್ಪು, ಉಮೇಶ್ ಟೖಲರ್, ಮನೋಜ್ ನೀರಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here