ಬಡಗನ್ನೂರು : ಅಶೋಕ ಜನಮನ 2025 ಕಾರ್ಯಕ್ರಮದ ಪ್ರಚಾರ ಸಭೆಯು ಅ. 9ರಂದು ಸುಮತಿ ರೈ ಅಣಿಲೆ ರವರ ಮನೆಯ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಪ್ರಮುಖರಾದ ಬಾಲಕೃಷ್ಣ ಪೂಜಾರಿ ಮಾತನಾಡಿ,ಶಾಸಕ ಅಶೋಕ್ ರೈ ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ನಡೆಯುವ ವಸ್ತ್ರ ವಿತರಣೆ, ಸಹ ಭೋಜನ ಮತ್ತು ಪತ್ರ ವಿತರಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ಪ್ರಮುಖರಾದ ಯೋಗೀಶ್ ಅಮೀನ್, ಸತೀಶ್ ಹೊಸಮನೆ, ಜಯರಾಜ್ ಶೆಟ್ಟಿ,ಅಣಿಲೆ ದಿಕ್ಷೀತ್ ರೖೆ ಕುತ್ಯಾಳ ಕಿರಣ್ ಕುಮಾರ್ ಅಣಿಲೆ, ನವೀನ್ ಕಮಾರ್ ಕೊಯಿಲ ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಉದಯಕುಮಾರ್ ರಾವ್ ಶರವು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಬಡಗನ್ನೂರು ಬೂತ್ ಸಮಿತಿ ಅಧ್ಯಕ್ಷ ಪ್ರಕಾಶ್ ರೈ ಕೊಯಿಲವಂದಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಅಶೋಕ್ ರೈ ಅಭಿಮಾನಿಗಳು ಬಾಗವಹಿಸಿದ್ದರು. ಬಳಿಕ ಪ್ರಕಾಶ್ ರೖೆ ಮತ್ತು ಅಶೋಕ್ ರೖೆ ಅಭಿಮಾನಿ ಬಳಗದವರಿಂದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.