





ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ತಾಲೂಕು ಉಪ್ಪಿನಂಗಡಿ ವಲಯ ವ್ಯಾಪ್ತಿಯ ಉಪ್ಪಿನಂಗಡಿ ಗ್ರಾಮದ ದುರ್ಗಾಗಿರಿ ಮತ್ತು ರಾಮನಗರ ಒಕ್ಕೂಟದ ಪ್ರಗತಿ ಬಂಧು ಮತ್ತು ಸ್ವ-ಸಹಾಯ ಸಂಘಗಳ ಸದಸ್ಯರ ಕ್ರೀಡಾಕೂಟವು ಅ.26ರಂದು ಉಪ್ಪಿನಂಗಡಿ ಶ್ರೀ ರಾಮ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.


ಕ್ರೀಡಾಕೂಟವನ್ನು ಶ್ರೀ ರಾಮ ಶಾಲೆಯ ಪೋಷಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಉದಯಕುಮಾರ್ ಅತ್ರಮಜಲು ಉದ್ಘಾಟಿಸಿದರು. ಮೇಲ್ವಿಚಾರಕರಾದ ಶಿವಪ್ಪ ಎಂ., ಒಕ್ಕೂಟದ ಅಧ್ಯಕ್ಷರಾದ ಲೋಕೇಶ್ ಬೆತ್ತೋಡಿ, ಚಂದ್ರಾವತಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾದ ಉಷಾಚಂದ್ರ ಮುಳಿಯ, ಸೇವಾಪ್ರತಿನಿಧಿ ಉಷಾ ಹರೀಶ್, ಸಿ.ಎಸ್.ಸಿ. ಕೇಂದ್ರದ ರಕ್ಷಿತಾ, ಸಂಘಗಳ ಪ್ರಬಂಧಕರು, ಸಂಯೋಜಕರು ಮತ್ತು ಸದಸ್ಯರು ಭಾಗವಹಿಸಿದರು.













