





ಪುತ್ತೂರು: ದೇಶದ ಮಾಜಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿಯ ಅಂಗವಾಗಿ ನ.19ಕ್ಕೆ ಪುತ್ತೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಕಾರ್ಯಕ್ರಮದ ಯಶಸ್ವಿಗಾಗಿ ಬಿಜೆಪಿ ಮಂಡಲದಿಂದ ಗ್ರಾಮ ಗ್ರಾಮಗಳಲ್ಲಿ ಹಿರಿಯರ ಬೇಟಿ ಕಾರ್ಯಕ್ರಮ ನಡೆಯುತ್ತಿದೆ.



ನ.10ರಂದು ಬಲ್ನಾಡು ಗ್ರಾಮದ ಸಾಜ ಬೂತಿನ ಹಾಗೂ ಬಿಳಿಯೂರು ಗ್ರಾಮದ ಬೂತಿನಲ್ಲಿ ಅಟಲ್ ವಿರಾಸತ್ ಕಾರ್ಯಕ್ರಮದ ಯಶಸ್ಸಿಗಾಗಿ ಬೂತ್ ಸಭೆ ನಡೆಯಿತು. ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಚನಿಲ ತಿಮ್ಮಪ್ಪ ಶೆಟ್ಟಿ, ಬಿ.ಎಸ್ ವಿಜಯ, ಕಿರಣ್ ಕುಮಾರ್, ಪರಮೇಶ್ವರಿ, ಸದಾನಂದ ನಾಯಕ್ ಸಹಿತ ಎರಡು ಬೂತ್ಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.















