





ನಿಡ್ಪಳ್ಳಿ; ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇಲ್ಲಿ ಮಕ್ಕಳ ದಿನಾಚರಣೆಯನ್ನು ನ.14 ರಂದು ಆಚರಿಸಲಾಯಿತು.ಮಾಜಿ ಪ್ರಧಾನಿ ಜವಹರಲಾಲ್ ನೆಹರುರವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಗುರು ಹೇಮಾ. ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾ ಶಿಕ್ಷಣ ಮಂತ್ರಿ ವಿನೋದ್ ಕುಮಾರ್ ,ಶಾಲಾ ಗೃಹ ಮಂತ್ರಿ ಮಹಮ್ಮದ್ ಶಹಿರ್ ಮಕ್ಕಳ ದಿನಾಚರಣೆ ಬಗ್ಗೆ ಮಾತನಾಡಿದರು.ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಾಲಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ನಾಯಕ ದಿಕ್ಷೀತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮಕ್ಕಳಿಗೆ ಏರ್ಪಡಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ಮಕ್ಕಳಿಗೆ ಬೆಲ್ಟ್ ವಿತರಣೆ; ಬಿ.ಎಫ್.ಫೂಟ್ ವಿಯರ್ ಸುಳ್ಯ ಇವರು ಶಾಲಾ ಎಲ್ಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಬೆಲ್ಟನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.





ವಿದ್ಯಾರ್ಥಿ ನಿ ಭವ್ಯಶ್ರೀ ಸ್ವಾಗತಿಸಿ, ನೆಫಿಸತ್ ಸ್ವಾಹಿಬಾ ವಂದಿಸಿದರು. ಆರತಿ ಎಂ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿಯರಾದ ಸುಮ.ಡಿ, ಸುಜಾತ ಸಹಕರಿಸಿದರು.
ಪೋಷಕ ಶಿಕ್ಷಕರ ಸಭೆ; ನಂತರ ನಡೆದ ಪೋಷಕ ಶಿಕ್ಷಕ ಸಭೆಯಲ್ಲಿ ಎಲ್.ಬಿ.ಎ ಹಾಗೂ ಫೊಕ್ಸೊ ಕಾಯ್ದೆ ಬಗ್ಗೆ ಮಾಹಿತಿ ನೀಡಲಾಯಿತು. ಮಕ್ಕಳ ಕಲಿಕಾ ಪ್ರಗತಿ, ಹಾಜರಾತಿ ಬಗ್ಗೆ ಚರ್ಚಿಸಲಾಯಿತು. ಪೋಷಕರಿಗೂ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.










