






ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ 100 ನೇ ಜಯಂತಿಯನ್ನು ನ.24ರಂದು ಆಚರಿಸಲಾಯಿತು.


ಶಾಲಾ ಉಪಾಧ್ಯಕ್ಷರಾದ ಪ್ರಸನ್ನ ಏನ್ ಭಟ್ ಮಾತನಾಡಿ, ಪುಟ್ಟಪರ್ತಿಯಲ್ಲಿ ಅವರಿಗಾದ ಜೀವನಾನುಭವಗಳನ್ನು ತಿಳಿಸಿ,ಶುಭ ಕೋರಿದರು.ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ ಮಾತನಾಡಿ, ಶ್ರದ್ದೆಯಿಂದ, ನಂಬಿಕೆಯಿಂದ ಮಾತ್ರ ಪ್ರತಿಫಲ ಸಿಗುತ್ತದೆ ವಿದ್ಯಾರ್ಥಿಗಳು ಗುರುಹಿರಿಯರಲ್ಲಿ ಹಾಗೂ ವಿದ್ಯೆಯಲ್ಲಿ ತಮ್ಮನ್ನು ತಾವು ಶೃದ್ದೆಯಿಂದ ತೊಡಗಿಸಿಕೊಂಡು ಬಾಬಾರವರ ಅನುಗ್ರಹ ಪಡೆಯುವಂತಾಗಲಿ ಎಂದರು.






ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ನಮ್ಮ ಜೀವಿತ ಕಾಲದಲ್ಲಿ ಅವಶ್ಯಕತೆಯಿರುವಲ್ಲಿ ಸಹಾಯ ಮಾಡುವುದು, ಪ್ರತಿಫಲ ಭಗವಂತ ನೀಡುತ್ತಾನೆ. ಜೀವನವೆಂಬುದು ಅಷ್ಟು ಸುಲಭವಲ್ಲ ಹಿರಿಯರು ಹೇಳಿದ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮುಂದೆ ಸಾಗುವಾಗ ಎಡವದ ಹಾಗೆ ಪ್ರಾಮಾಣಿಕ ವ್ಯಕ್ತಿಯಾಗಿ, ತಂದೆ ತಾಯಿಗೆ ಒಳ್ಳೆ ಮಕ್ಕಳಾಗಿ ಬಾಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಯರಾಮ ಕೆದಿಲಾಯ ಶಿಬರ ಮಾತನಾಡಿ,ಬಾಬಾರವರು ನಂಬಿದ ಭಕ್ತರಿಗೆ ಅನುಕೂಲಕರವಾದ ಹಾಗೂ ಅದ್ಭುತವಾದ ರಕ್ಷಣೆಯನ್ನು ಕೊಡುತ್ತಾರೆ. ಭಗವಂತನ ಕೆಲಸ ಪೂರ್ಣ ಮಾಡಲು ಮಹಾಪುರುಷರು ಹುಟ್ಟುತ್ತಾರೆ ಅಂತವರಲ್ಲಿ ಬಾಬಾರವರು ಒಬ್ಬರು. ಶ್ರೀ ಭಗವಾನ್ ಸತ್ಯಸಾಯಿ ಬಾಬಾರವರು ಸಮಾಜಸೇವೆ ಹಾಗೂ ಅವರ ಅದ್ಭುತ ಸಹಾಯ ಮಾಡುವ ಮನೋಭಾವನೆ ಎಲ್ಲರಿಗೂ ಸ್ಪೂರ್ತಿ ಎಂದರು.
ಈ ಸಂದರ್ಭದಲ್ಲಿ ಶಾಲಾ ಕೋಶಾಧಿಕಾರಿ ಹರೀಶ್ ಪುತ್ತೂರಾಯ ಹಾಗೂ ಶಿಕ್ಷಕ – ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಆರಾಧ್ಯ, ವಿಶಾಖಾ, ಹಂಸಿಕ ಪ್ರಾರ್ಥಿಸಿದರು. ಶಾಲಾ ಮುಖ್ಯ ಗುರು ಪ್ರಸನ್ನ ಕೆ ಸ್ವಾಗತಿಸಿದರು. ವಾಣಿ ಧನ್ಯವಾದಗೈದರು.ಪ್ರಮೀಳಾ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ರವಿಶಂಕರ್ ಬಾಬಾರವರ ಸಂದೇಶವನ್ನು ತಿಳಿಸಿದರು.










