





ರಾಮಕುಂಜ: ಕೊಯಿಲ ಕೆ.ಸಿ.ಫಾರ್ಮ್ ಸರ್ಕಾರಿ ಶಾಲೆಯಲ್ಲಿ ಗ್ರಾಮ ಪಂಚಾಯತಿನ ನರೇಗಾ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಶೌಚಾಲಯದ ಉದ್ಘಾಟನೆಯನ್ನು ಉದ್ಯಮಿ ಕೇಶವ ಅಮೈ ಕಲಾಯಿಗುತ್ತು ನೆರವೇರಿಸಿದರು.


ಬಳಿಕ ಮಾತನಾಡಿದ ಕೇಶವ ಅಮೈ, ಸರ್ಕಾರಿ ಶಾಲೆಯ ಅಭಿವೃದಿಗೆ ಸರ್ಕಾರದ ಅನುದಾನಕ್ಕಾಗಿ ಕಾಯುವ ಬದಲಾಗಿ ಶಿಕ್ಷಣ ಅಭಿಮಾನಿಗಳು ಆರ್ಥಿಕವಾಗಿ ಕೈಜೋಡಿಸಿದಾಗ ಶಾಲೆ ಉಳಿಯಲು ಸಾಧ್ಯ. ಶಾಲಾ ಅಭಿವೃದ್ಧಿಗೆ ನನ್ನ ಬೆಂಬಲ ಯಾವಾಗಲು ಇರುತ್ತದೆ ಎಂದು ಹೇಳಿದರು.





ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಗೌಡ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಕೊಯಿಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾಸುಭಾಷ್ ಶೆಟ್ಟಿ, ಪಿಡಿಓ ಸಂದೇಶ್, ಕಾರ್ಯದರ್ಶಿ ಪಮ್ಮು ಮತ್ತಿತರರು ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಅನುಪಮ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಲಂಕೇಶ್ ನಿರೂಪಿಸಿದರು.










