





ನಿಡ್ಪಳ್ಳಿ : ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರಿಗೆ ಮತ್ತು ಸಿಬ್ಬಂದಿಗಳಿಗೆ ನ.22 ರಂದು ಸವಣೂರಿನಲ್ಲಿ ನಡೆದ ಬೊಲ್ಪು- 2025-26 ಅಂತರ್ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಹಿಳಾ ತಂಡ ಒಟ್ಟು 79 ಅಂಕಗಳೊಂದಿಗೆ ಮಹಿಳಾ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.


ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡವರ ವಿವರ ಈ ಕೆಳಗಿನಂತಿರುತ್ತದೆ.
ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ 100 ಮೀ., 200 ಮೀ. ಮತ್ತು 400 ಮೀ ಓಟ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ,ಗ್ರಾಮ ಪಂಚಾಯತ್ ಸದಸ್ಯರಾದ ಗ್ರೆಟ್ಟಾ ಜೆನೆಟಾ ಡಿ’ ಸೋಜಾ ತ್ರಿಬಲ್ ಜಂಪ್ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ,ಗ್ರಾಮ ಪಂಚಾಯತ್ ಸದಸ್ಯರಾದ ನಂದಿನಿ ಅರ್.ರೈ 200 ಮೀ.ಓಟದಲ್ಲಿ ದ್ವಿತೀಯ ಮತ್ತು 100 ಮೀ. ಮತ್ತು 400 ಮೀ.ಓಟದಲ್ಲಿ ತೃತೀಯ ಸ್ಥಾನ,ಗ್ರಾಮ ಪಂಚಾಯತ್ ಸದಸ್ಯರಾದ ಬಾಲಚಂದ್ರ ನಾಯ್ಕ 200 ಮೀ.ಓಟ ದ್ವಿತೀಯ ಸ್ಥಾನ,ಗ್ರಾಮ ಪಂಚಾಯತ್ ಸಿಬ್ಬಂದಿ ವಿನೀತ್ ಕುಮಾರ್ 200 ಮೀ. ಓಟದಲ್ಲಿ ತೃತೀಯ ಸ್ಥಾನ, ಗ್ರಾಮ ಪಂಚಾಯತ್ ಸಿಬ್ಬಂದಿ ರೇವತಿ 1500 ಮೀ. ಓಟದಲ್ಲಿ ತೃತೀಯ ಸ್ಥಾನ,ಗ್ರಂಥಾಲಯ ಮೇಲ್ವಿಚಾರಕಿ ಪವಿತ್ರ 200 ಮೀ, 400 ಮೀ. ಮತ್ತು ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ರಿಲೇಯಲ್ಲಿ ದ್ವಿತೀಯ ಸ್ಥಾನ, ಸ್ವಚ್ಚವಾಹಿನಿ ಸಿಬ್ಬಂದಿ ದೀಪಿಕಾ 1500 ಮೀ., ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಹಾಗೂ ರಿಲೇಯಲ್ಲಿ ದ್ವಿತೀಯ ಸ್ಥಾನ, ಪಶುಸಖಿ ತೇಜಸ್ವಿನಿ ಎಂ. 1500 ಮೀ., 800 ಮೀ., 400 ಮೀ. ಓಟದಲ್ಲಿ ತೃತಿಯ ಸ್ಥಾನ ಹಾಗೂ ರಿಲೇಯಲ್ಲಿ ದ್ವಿತೀಯ ಸ್ಥಾನ,ಉದ್ಯೋಗ ಸಖಿ ಆಶಾಲತಾರವರು ಉದ್ದ ಜಿಗಿತ, ಚಕ್ರ ಎಸೆತ ಪ್ರಥಮ ಹಾಗೂ 1500 ಮೀ. ಓಟದಲ್ಲಿ ದ್ವಿತೀಯ ಸ್ಥಾನ,ಶಾಂತದುರ್ಗಾ ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷೆ ಮಾಲತಿ ಗುಂಡು ಎಸೆತ, ಉದ್ದ ಜಿಗಿತದಲ್ಲಿ ದ್ವಿತೀಯ ಹಾಗೂ ಚಕ್ರ ಎಸೆತದಲ್ಲಿ ತೃತೀಯ ಸ್ಥಾನ, ನಲ್ ಜಲ್ ಮಿತ್ರ ಸಿಬ್ಬಂದಿ ಸುಮಿತ್ರಾ 1500 ಮೀ. ಪ್ರಥಮ, 800 ಮೀ. ಮತ್ತು 400 ಮೀ. ಓಟದಲ್ಲಿ ದ್ವಿತೀಯ ಹಾಗೂ ರಿಲೇಯಲ್ಲಿ ದ್ವಿತೀಯ ಸ್ಥಾನ, ಸ್ವಚ್ಚ ವಾಹಿನಿ ಸಿಬ್ಬಂದಿ ಶಾಲಿನಿ 1500 ಮೀ. ದ್ವಿತೀಯ ಮತ್ತು ರಿಲೇಯಲ್ಲಿ ದ್ವಿತೀಯ ಸ್ಥಾನ,ಸ್ಥಳೀಯ ಸಂಪನ್ಮೂಲ ವ್ಯಕ್ತಿ ಚಿತ್ರಕಲಾ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.





ಮಹಿಳೆಯರ ವಿಭಾಗದ ಪೈಪೋಟಿಯ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಚಾಂಪಿಯನ್;
ಮಹಿಳೆಯರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಹಳ ಪೈಪೋಟಿ ನಡೆಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಚಾಂಪಿಯನ್ ಶಿಪ್ ಪಡೆದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ ಯಂ. ತಂಡದ ನೇತೃತ್ವ ವಹಿಸಿಕೊಂಡಿದ್ದರು.
ಬೊಲ್ಪು ಕ್ರೀಡಾ ಕೂಟವು ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಒಂದು ಹೊಸ ಸ್ಪರ್ಧಾ ಹುರುಪನ್ನು ತಂದುಕೊಟ್ಟಿದೆ.ನಿಡ್ಪಳ್ಳಿ ಒಂದು ಸಣ್ಣ ಗ್ರಾಮ ಪಂಚಾಯತ್ ಆದರೂ ಇಲ್ಲಿಂದ ಭಾಗವಹಿಸಿದ ತಂಡದಲ್ಲಿದ್ದವರು ಬಹಳ ಕ್ರೀಡಾ ಮನೋಭಾವ ಮತ್ತು ಆಸಕ್ತಿಯಿಂದ ಭಾಗವಹಿಸಿದ ಕಾರಣ ಸಮಗ್ರ ಪ್ರಶಸ್ತಿ ಪಡೆಯಲು ಸಾಧ್ಯವಾಗಿದ್ದು ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ
ವೆಂಕಟ್ರಮಣ ಬೋರ್ಕರ್
ಅಧ್ಯಕ್ಷರು, ನಿಡ್ಪಳ್ಳಿ ಗ್ರಾ.ಪಂ.
ಬೊಲ್ಪು ಕ್ರೀಡಾಕೂಟವು ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ಹೊಸ ಸ್ಪರ್ಧಾ ವೇದಿಕೆಯನ್ನು ನೀಡಿದೆ. ಆದರಲ್ಲೂ ನಮ್ಮ ಪಂಚಾಯತ್ ನ ಮಹಿಳಾ ಒಕ್ಕೂಟದ ಹಾಗೂ ಸಿಬ್ಬಂದಿ ವರ್ಗದ ಸಾಧನೆ ಅಪ್ರತಿಮವಾಗಿದೆ.ಎಲ್ಲರನ್ನು ನಾನು ಅಭಿನಂದಿಸುತ್ತೇನೆ.
ಜಯಪ್ರಕಾಶ.ಯಂ,ಪಿಡಿಒ ನಿಡ್ಪಳ್ಳಿ ಗ್ರಾ.ಪಂ










