




ಪುತ್ತೂರು: ಸರ್ವೆಯ ಶ್ರೀ ಗೌರಿ ಮೆಮೋರಿಯಲ್ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಇಂದುಶೇಖರ್ ಪಿಬಿ ಅಧ್ಯಕ್ಷತೆಯಲ್ಲಿ ನಡೆಯಿತು.









ಮುಖ್ಯ ಅತಿಥಿ ಹಾಗೂ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕರು ಹಾಗೂ ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಇಲ್ಲಿನ ನಿವೃತ್ತ ಮುಖ್ಯ ಗುರು ಬಿ. ವಿ. ಶಗ್ರಿತ್ತಾಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ವಿದ್ಯಾರ್ಥಿಗಳು ಮತ್ತು ನೆರೆದವರಿಗೆ ಪ್ರೇರಣೆಯ ಮಾತನಾಡಿದರು.
ಅಭ್ಯಾಗತರಾಗಿ ಆಗಮಿಸಿದ ಮುಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ಕಮಲೇಶ್ ಎಸ್ ವಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಂಡೂರು ಗ್ರಾಮ ಪಂಚಾಯತ್ ನ ಇನ್ನೋರ್ವ ಸದಸ್ಯರಾದ ಪ್ರೇಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಡಾ. ಯಾದವಿ ಜಯಕುಮಾರ್ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಜಯಂತ ಬೇಕಲ್, ಮಹಾಬಲ ರೈ, ಶಶಿಧರ್ ಎಸ್. ಡಿ, ವಿಜಯಲಕ್ಷ್ಮಿ ಶೆಣೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಮೋನಪ್ಪ ನಾಯ್ಕ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಯತೀಶ್ ರೈ ಮೇಗಿನಗುತ್ತು, ಅಧ್ಯಕ್ಷ ಸುರೇಶ್ ಎಸ್. ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಸಂಸ್ಥಾಪಕ ವಿಜಯಕುಮಾರ್ ಅತಿಥಿ ಅಭ್ಯಾಗತರಿಂದ ಪುಷ್ಪ ನಮನ ಸಲ್ಲಿಸಲಾಯಿತು. 2024- 25ನೇ ಸಾಲಿನಲ್ಲಿ ಅತ್ಯಧಿಕ ಅಂಕಗಳಿಸಿದ ಎಸ್ ಎಸ್ ಎಲ್ ಸಿ ಯ ಒಟ್ಟು 14 ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನೀಡಲಾಯಿತು. ನೂಜಿ ವೆಂಕಟರಮಣ ಗೌಡರ ಸ್ಮರಣಾರ್ಥ ಹಿರಿಯ ವಿದ್ಯಾರ್ಥಿಗಳಾದ ರಶ್ಮಿತಾ ಕರ್ಕೇರ, ಗುಣಕರ ಶೆಟ್ಟಿ ಮತ್ತು ರವೀಂದ್ರ.ಕೆ ಅವರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು.
ಸಾಂಸ್ಕೃತಿಕ ಹಾಗೂ ಕ್ರೀಡಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಚಾಲಕರಾದ ಡಾ. ಯಾದವಿಜಯಕುಮಾರ್ ಸ್ವಾಗತಿಸಿ ಮುಖ್ಯ ಗುರು ಸೋಮಶೇಖರ್ ಆರ್ ವರದಿ ವಾಚಿಸಿದರು. ವಂದನಾರ್ಪಣೆ ಶಿಕ್ಷಕರಾದ ವಿಜಯಕುಮಾರ್.ಜೆ ನೆರವೇರಿಸಿದರು. ಶಿಕ್ಷಕಿ ಸುಜಾತಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.










