ಪುತ್ತೂರು: ದ.ಕ.ಜಿ.ಪಂ.ಸ. ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲ್ ಇಲ್ಲಿಗೆ ಚಿಣ್ಣರ ಆಟಿಕೆ ತಾಣವನ್ನು ಎಂಸಿಸಿ ಸೂರಂಬೈಲ್ ವತಿಯಿಂದ ಡಿ.7ರಂದು ಕೊಡುಗೆಯಾಗಿ ಅರ್ಪಿಸಲಾಯಿತು.

ಚಿಣ್ಣರ ಆಟಿಕೆ ತಾಣದ ಉದ್ಘಾಟನೆ ನೆರವೇರಿಸಿದ ಎಂಸಿಸಿ ತಂಡದ ಮಾರ್ಗದರ್ಶಕ ಜಗನ್ಮೋಹನ್ ರೈ ಸೂರಂಬೈಲ್ ಮಾತನಾಡಿ ”ನಾನು ಕೂಡ ಈ ಶಾಲೆಯ ಹಿರಿಯ ವಿದ್ಯಾರ್ಥಿ ನಮ್ಮ ಮನೆತನದ ಈ ಯುವಕರ ತಂಡ ತಾವು ಕಲಿತ ಶಾಲೆಗೆ ತಮ್ನ ಕರ್ತವ್ಯ ಎನ್ನುವ ರೀತಿಯಲ್ಲಿ ಒಂದು ಉತ್ತಮ ಕೊಡುಗೆಯನ್ನು ನೀಡಿದೆ ಮಕ್ಕಳೆಲ್ಲಾ ಇದರ ಪ್ರಯೋಜನ ಪಡೆದು ಉತ್ತಮ ರೀತಿಯಲ್ಲಿ ಕಲಿತು ದೇಶಕ್ಕೆ ಕೊಡುಗೆಗಳಾಗಬೇಕು” ಎಂದರು.
ಮುಖ್ಯ ಅತಿಥಿಯಾಗಿದ್ದ ಡಾ. ಅಖಿಲೇಶ್ ಪಿ.ಎಮ್ ಮಾತನಾಡಿ ”ಆಟದ ಮೂಲಕ ಕಲಿಕೆ ಆದಾಗ ಮಾತ್ರ ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಕಲಿಕೆಗೆ ಪೂರಕವಾದ ಚಿಣ್ಣರ ಆಟಿಕೆ ತಾಣವನ್ನು ಎಂಸಿಸಿ ತಂಡ ನಿರ್ಮಿಸಿ ಕೊಡುವ ಮೂಲಕ ಒಂದು ಶ್ರೇಷ್ಠ ಕಾರ್ಯವನ್ನು ನಡೆಸಿದೆ” ಎಂದರು. ಸೀತಾರಾಮ್ ಭರಣ್ಯ ಮಾತನಾಡಿ, “ಸೂರಂಬೈಲ್ ಮನೆತನ ಹಿಂದಿನಿಂದಲೂ ಈ ಶಾಲೆಗೆ ಅನೇಕ ಕೊಡುಗೆಗಳನ್ನ ನೀಡುತ್ತಾ ಬಂದಿದೆ. ಇದೀಗ ಈ ಮನೆತನದ ಸದಸ್ಯರನ್ನು ಹೊಂದಿರುವ ಎಂಸಿಸಿ ಸೂರಂಬೈಲ್ ತಂಡ ಕೂಡ ಈ ಶಾಲೆಗೆ ಚಿಣ್ಣರ ಆಟಿಕೆ ತಾಣ ನಿರ್ಮಾಣ ಮಾಡಿ ಕೊಡುವ ಮೂಲಕ ಸಾರ್ಥಕ್ಯ ಕಾರ್ಯವನ್ನು ಮೆರೆದಿದೆ. ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ಇಂತಹ ಪ್ರೇರಣಾದಾಯಿ ಕಾರ್ಯಗಳು ನಡೆದಾಗ ಮಾತ್ರ ಕನ್ನಡ ಮಾಧ್ಯಮ ಶಾಲೆಗಳು ಉಳಿಯಲು ಸಾಧ್ಯ” ಎಂದರು.
ಮುಖ್ಯಗುರು ಉರ್ಮಿಳಾ ಎಡಮಲೆ ಅವರು ಎಂಸಿಸಿ ತಂಡದ ಕಾರ್ಯವನ್ನು ಶ್ಲಾಘಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗೇಶ್ ಪಾಟಾಳಿ, ನಿವೃತ್ತ ಮುಖ್ಯಗುರು ಶ್ರೀಧರ ವೈ ಕೆದಂಬಾಡಿ ಮೂಲೆ, ದಾಕ್ಷಾಯಿಣಿ ಶೆಟ್ಟಿ ಸೂರಂಬೈಲ್ ಸಂದರ್ಬೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಾಶಿವ ರೈ ಸೂರಂಬೈಲ್ ವಹಿಸಿದ್ದರು. ಅಂಗನವಾಡಿ ಕೇಂದ್ರ ಸೂರಂಬೈಲ್ ಇಲ್ಲಿನ ಕಾರ್ಯಕರ್ತೆ ನೀಲಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಸೂರ್ಯಂಬೈಲ್, ಚೇತನಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ್ ತೂಂಬಡ್ಕ, ಎಂಸಿಸಿ ಪದಾಧಿಕಾರಿಗಳಾದ ಗಿರೀಶ್ ಆಳ್ವ ಸೂರಂಬೈಲ್, ನಿತಿನ್ ರೈ ಸೂರಂಬೈಲ್, ಪ್ರವೀಣ್ ಶೆಟ್ಟಿ ಸೂರಂಬೈಲ್ ಉಪಸ್ಥಿತರಿದ್ದರು. ಪ್ರದೀಪ್ ರೈ ಸೂರಂಬೈಲ್ ಸ್ವಾಗತಿಸಿದರು. ಮನೋಜ್ ರೈ ಸೂರಂಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭರತ್ ಆಳ್ವ ಸೂರಂಬೈಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಾಲೆಯ ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳು, ಪೋಷಕರು ಸೂರಂಬೈಲ್ ಕುಟುಂಬದ ಹಿರಿಯರು ಉಪಸ್ಥಿತರಿದ್ದರು. ಎಂಸಿಸಿ ತಂಡದ ದೀಪಕ್ ರೈ ಸೂರಂಬೈಲ್, ಅಜಿತ್ ರೈ ಸೂರಂಬೈಲ್, ಭವಿಷ್ ರೈ ಸೂರಂಬೈಲ್, ರೂಪ ಶೆಟ್ಟಿ ಸೂರಂಬೈಲ್, ಸಂತೋಷ್ ರೈ ಬೈಲುಗುತ್ತು, ಸಚಿನ್ ರೈ ಬೈಲುಗುತ್ತು, ಪ್ರತಿಮ ಶೆಟ್ಟಿ ಮುಲ್ಕಿ ಸಹಕರಿಸಿದರು.