ಪುತ್ತೂರು: ಸುಳ್ಯ ನಗರ ಪಂಚಾಯತ್ ವಾರ್ಡ್ ಸದಸ್ಯರ ಅನುದಾನದಡಿಯಲ್ಲಿ ಬೋರುಗುಡ್ಡೆ ವಾರ್ಡ್ ಜಟ್ಟಿಪ್ಪಳ್ಳ ರಸ್ತೆಯ ಬಲ ಬಾಗದ ಕನಿಕರಪಳ್ಳ 2 ನೇ ಅಡ್ಡ ರಸ್ತೆಯ ಕಾಂಕ್ರಿಟೀಕರಣ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಮತ್ತು ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯ ಕೆ. ಎಎಸ್ ಉಮ್ಮರ್ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ. ಎಸ್. ಉಮ್ಮರ್ ನಡೆದಾಡಲೂ ಸಾಧ್ಯವಾಗದೆ ದುಸ್ಥಿತಿಯಲ್ಲಿದ್ದ 2 ನೇ ಅಡ್ಡ ರಸ್ತೆ ಸರ್ವ ಋತು ರಸ್ತೆಯಾಗಿ ಕಾಂಕ್ರಿಟಿಕರಣ ಕಾಮಗಾರಿ ಯಾಗಬೇಕೆಂದು ಇಲ್ಲಿನ ನಿವಾಸಿಗಳ ಬಹು ಕಾಲದ ಬೇಡಿಕೆಯಾಗಿತ್ತು, ಕಾಮಗಾರಿಯ ಸಂದರ್ಭದಲ್ಲಿ ನಿವಾಸಿಗಳ ಉತ್ತಮ ರೀತಿಯ ಸಹಕಾರದಿಂದ ರಸ್ತೆ ಉತ್ತಮ ರೀತಿಯಲ್ಲಿ ನಿರ್ಮಾಣ ವಾಗಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಇಂದಿರಾ ಟೀಚರ್, ರಫೀಕ್, ಕುಶಾಲಪ್ಪ, ರವಿ, ರಫೀಕ್, ಸಿಯಾದ್, ಲತೀಫ್ ಮೊದಲಾದವರು ಉಪಸ್ಥಿತರಿದ್ದರು
