




ರಾಮಕುಂಜ: ಇಲ್ಲಿನ ಬಾರಿಂಜ ಕುಟುಂಬಸ್ಥರ ಸೇವಾರ್ಥ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ’ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಡಿ.10ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.




ಸಂಜೆ ಚೌಕಿ ಪೂಜೆ ನಡೆದು ಪ್ರಸಾದ ವಿತರಣೆ, ಬಳಿಕ ಯಕ್ಷಗಾನ ಬಯಲಾಟ, ರಾತ್ರಿ ಅನ್ನಸಂತರ್ಪಣೆ ನಡೆಯಿತು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಪವಿತ್ರಪಾಣಿ ನರಹರಿ ಉಪಾಧ್ಯಾಯ, ಪ್ರಧಾನ ಅರ್ಚಕ ಅನಂತ ಉಡುಪ, ಶ್ರೀಕಾಂತ ಕಲ್ಲೂರಾಯ ಬಾಜಳ್ಳಿ, ಕೃಷ್ಣಮೂರ್ತಿ ಕಲ್ಲೇರಿ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್ ರಾಮಕುಂಜ, ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ ಎಸ್.ಟಿ., ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ ಭಟ್ ಉಪ್ಪಂಗಳ, ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ನಿರ್ದೇಶಕ ಅಶೋಕ್ ಕೊಯಿಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ, ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಮಾಜಿ ಉಪಾಧ್ಯಕ್ಷ ರಮೇಶ್ ಎನ್.ಸಿ.ತಾವೂರು, ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆ, ಪುತ್ತೂರು ಎವಿಜಿ ಆಂಗ್ಲಮಾಧ್ಯಮ ಶಾಲಾ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ಸಂಚಾಲಕ ಎ.ವಿ.ನಾರಾಯಣ, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ, ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ.ಬಾಕಿಲ, ಯಕ್ಷಧ್ರುವ ಪಟ್ಲ ಕಡಬ ವಲಯ ಕಾರ್ಯದರ್ಶಿ ವೆಂಕಟ್ರಮಣ ಪ್ರಸಾದ್ ಆಲಂಕಾರು, ತಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಮಾಜಿ ಸದಸ್ಯರಾದ ಮುಕುಂದ ಬಜತ್ತೂರು, ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜಯಾನಂದ ಬಂಟ್ರಿಯಾಲ್, ಜನಾರ್ದನ ಗೌಡ ಬರೆಮೇಲು ಶಾಂತಿನಗರ, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸಿ.ಹೆಚ್., ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜು ಉಪನ್ಯಾಸಕ ವಿಶ್ವನಾಥ ಶೆಟ್ಟಿ, ಅಲುಂಬುಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಗೌಡ ಬನ್ನೂರು, ನಿವೃತ್ತ ಶಿಕ್ಷಕ ಜಯರಾಮ ಗೌಡ ಗಟ್ಟಿಗಾರು ಕೋಡಿಂಬಾಳ, ಇಂಜಿನಿಯರ್ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ಗಣೇಶ ರೈ ಮನವಳಿಕೆ, ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ಜಯಂತಿನಾಗೇಶ್ ತಾವೂರು, ನಿವೃತ್ತ ಉಪನ್ಯಾಸಕ ಗಣರಾಜ್ ಕುಂಬ್ಳೆ, ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೆ.ಎಸ್.ಕೊಯಿಲ, ಪುತ್ತೂರು ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಧರ ರೈ ಕೋಡಂಬು, ಕೆಸಿಡಿಸಿ ಹಿರಿಯ ಅಧಿಕಾರಿ ರವಿಪ್ರಸಾದ್ ಬಿ.ವಿ., ಗೋಳಿತ್ತಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪೂವಪ್ಪ ಗೌಡ ಸಂಪ್ಯಾಡಿ, ಶಾರದಾನಗರ ಶ್ರೀ ಶಾರದಾಂಬಾ ಭಜನಾ ಮಂದಿರ ಅಧ್ಯಕ್ಷ ಸಂಜೀವ ಶಾರದಾನಗರ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕರುಣಾಕರ ದೊಡ್ಡಉರ್ಕ, ಮಹೇಶ ಬಾಂತೊಟ್ಟು, ಜಗದೀಶ ಅಂಬಾ, ಜಗದೀಶ ಅಜ್ಜಿಕುಮೇರು, ಶೈಲಜಾ, ಪುಷ್ಪಾ, ಮಾಜಿ ಅಧ್ಯಕ್ಷ ಮುರಳಿರಾವ್ ರಾಮಕುಂಜ, ಪ್ರಮುಖರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಹರಿಶಂಕರ ಕೋಡಿಲ, ದಿವಾಕರ ರಾವ್ ಪಂಚವಟಿ ರಾಮಕುಂಜ, ಪ್ರಶಾಂತ್ ಆರ್.ಕೆ.ರಾಮಕುಂಜ, ಮೋಹನ ಕೆ.ಶರವೂರು, ಬಾಲಚಂದ್ರ ಮುಚ್ಚಿಂತಾಯ, ಜನಾರ್ದನ ಕದ್ರ, ಬಾಲಕೃಷ್ಣ ಗೌಡ ಪಟ್ಟೆ ಸಂಪ್ಯಾಡಿ ಸಹಿತ ಹಲವು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.






ಬಾರಿಂಜ ಕುಟುಂಬಸ್ಥರಾದ ಲಕ್ಷ್ಮೀ, ಪದ್ಮಪ್ಪ ಗೌಡ ರಾಮಕುಂಜ, ಚಂದ್ರಗೌಡ ಬನ್ನೂರು, ಈಶ್ವರ ಗೌಡ ಬಾರಿಂಜ, ಗಣೇಶ ಗೌಡ ಬಾರಿಂಜ, ರುಕ್ಮಯ ಗೌಡ ಬಾರಿಂಜ, ಶ್ರೀಧರ ಗೌಡ ಚಾಮೆತ್ತಡ್ಕ , ಹರೀಶ ಗೌಡ ಬಾರಿಂಜ, ರಾಮಕೃಷ್ಣ ಮಂಗಳೂರು, ಕಮಲಾಕ್ಷ ಗೌಡ ಬಾರಿಂಜ, ಕೃಷ್ಣವೇಣಿ, ರಾಧ, ಸರಸ್ವತಿ, ಪುಷ್ಪಾ, ಚಂದ್ರಾವತಿ, ಮೋಹಿನಿ, ಚಿತ್ರಾವತಿ, ರಶ್ಮಿ, ರಾಧಿಕಾ ಹಾಗೂ ಕುಟುಂಬಸ್ಥರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶ್ರೀರಾಮ ಅಶ್ವತ್ಥಕಟ್ಟೆ ಪೂಜಾ ಸಮಿತಿ ಸಂಪ್ಯಾಡಿ, ಶಾರದಾನಗರ ಶ್ರೀ ಶಾರದಾ ಭಜನಾ ಮಂಡಳಿ, ಬಿಬಿಬಿ ಬ್ರದರ‍್ಸ್ ರಾಮಕುಂಜ, ಗಣೇಶೋತ್ಸವ ಸಮಿತಿ ಕೊಯಿಲ-ರಾಮಕುಂಜ, ಅಲುಂಬುಡ ಸೇವಾ ಪ್ರತಿಷ್ಠಾನ ಬನ್ನೂರು ಮತ್ತಿತರ ಸಂಘಟನೆ ಸದಸ್ಯರು ಸಹಕರಿಸಿದರು.
ಸಾವಿರಾರು ಮಂದಿಗೆ ಅನ್ನಸಂತರ್ಪಣೆ;
ಸಂಜೆ ಚೌಕಿ ಪೂಜೆ ನಡೆದು ಪ್ರಸಾದ ವಿತರಣೆ ಮಾಡಲಾಯಿತು. ರಾತ್ರಿ ಸುಮಾರು ಒಂದೂವರೇ ಸಾವಿರಕ್ಕೂ ಹೆಚ್ಚು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಯಕ್ಷಗಾನದ ರಂಗಸ್ಥಳವನ್ನು ಪುಷ್ಪಾಲಂಕೃತಗೊಳಿಸಲಾಗಿತ್ತು. ಯಕ್ಷಗಾನದ ಹಿನ್ನೆಲೆಯಲ್ಲಿ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ವಿದ್ಯುದ್ದೀಪದ ಶೃಂಗಾರ ಮಾಡಲಾಗಿತ್ತು.






