







ಪುತ್ತೂರು: ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಶ್ರೀ ಅನ್ನಪೂರ್ಣೇಶ್ವರಿ ಚಾರಿಟಿ ಪೌಂಡೇಶನ್ ಆಶ್ರಯದಲ್ಲಿ ನವೀಕರಿಸಬಹುವಾದ ಇಂಧನ, ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲಿನ ಬಗ್ಗೆ ಗ್ರಾಮ ಪಂಚಾಯತ್ ಪ್ರತಿನಿಧಿಗಳಿಗೆ ಮತ್ತು ಸ್ವಸಹಾಯ ಸಂಘದ ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಒಳಮೊಗ್ರು ಗ್ರಾ.ಪಂ.ಸಭಾಭವನದಲ್ಲಿ ಡಿ.17ರಂದು ನಡೆಯಿತು.


ಒಳಮೊಗ್ರು ಗ್ರಾ.ಪಂ.ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅವರು ಉದ್ಘಾಟಿಸಿದರು. ಟ್ರಸ್ಟ್ನ ವಿನಾಯಕ ಅವರು ನವೀಕರಿಸಬಹುವಾದ ಇಂಧನ ಹಾಗೂ ಮಳೆಕೊಯ್ಲು ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟ್ನ ಸದಸ್ಯೆ ಸೌಮ್ಯರವರು ಇಂಧನ ಮತ್ತು ಸೋಲಾರ್ ಅಳವಡಿಕೆಯ ಬಗ್ಗೆ ಮಾಹಿತಿ ನೀಡಿದರು.



ಕಾರ್ಯಕ್ರಮದಲ್ಲಿ ತಾ.ಪಂ.ಎನ್ಆರ್ಎಲ್ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಜಗತ್ ಕೆ., ಗ್ರಾ.ಪಂ.ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್ಆರ್ಎಲ್ಎಂ ಕೃಷಿಯೇತರ ಚಟುವಟಿಕೆ ತಾಲೂಕು ವ್ಯವಸ್ಥಾಪಕಿ ನಳಿನಾಕ್ಷಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಸ್ತ್ರೀಶಕ್ತಿ ಮತ್ತು ಸಂಜೀವಿನಿ ಗುಂಪಿನ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.










