







ಪುತ್ತೂರು: ಕನ್ನಡ ಫಿಲಂ ಚೇಂಬರ್ (ರಿ) ವತಿಯಿಂದ ನೀಡಲಾಗುವ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ”ಗೆ ಪುತ್ತೂರು ತಾಲೂಕಿನ ಬಂಗ್ಲಗುಡ್ಡೆ ಕಾವು ನಿವಾಸಿ ಚಂದ್ರ ಬಿ. ಬಂಗ್ಲಗುಡ್ಡೆ ಕಾವು ಅವರು ಆಯ್ಕೆಯಾಗಿದ್ದಾರೆ.



ಜ್ಯೋತಿಷ್ಯರು, ಸಮಾಜ ಸೇವಕರು, ರಂಗಭೂಮಿ ಕಲಾವಿದರು, ನಾಟಕ ಬರಹಗಾರ ಹಾಗೂ ನಿರ್ದೇಶಕರು, ಧರ್ಮದರ್ಶಿಯಾಗಿ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನ ಬಂಗ್ಲಗುಡ್ಡೆ ಕಾವು ಇವರ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಹಾಗೂ ನಿರಂತರ ಸೇವೆಯನ್ನು ಗುರುತಿಸಿ ಈ ಗೌರವ ಪ್ರದಾನ ಮಾಡಲಾಗುತ್ತಿದೆ.



ಕನ್ನಡ ಫಿಲಂ ಚೇಂಬರ್ (ರಿ) ಆಯೋಜಿಸುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಿಸೆಂಬರ್ 24, 2025ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವುದು.









