ಸಾಲ್ಮರ: ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಗೆ ನಗರಸಭೆಯಿಂದ ದಂಡ

0

ಪುತ್ತೂರು: ರಸ್ತೆ ಬದಿ ತ್ಯಾಜ್ಯ ಎಸೆದು ಹೋದ ವ್ಯಕ್ತಿಯನ್ನು ಸಿಸಿ ಕ್ಯಾಮರ ಮೂಲಕ ಪತ್ತೆ ಮಾಡಿದ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದ ಘಟನೆ ಸಾಲ್ಮರ ಕೊಟೇಚಾ ಹಾಲ್ ನಲ್ಲಿ ನಡೆದಿದೆ.


ಡಿ.5ರಂದು ಸಾಲ್ಮರ ಕೊಟೇಚಾ ಹಾಲ್ ಬಳಿ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ವರು ರಸ್ತೆ ಬದಿ ತ್ಯಾಜ್ಯ ಎಸೆದು ಹೋಗಿದ್ದಾರೆ. ಈ ಕುರಿತು ಸ್ಥಳೀಯರು ನಗರಸಭೆಗೆ ದೂರು ನೀಡಿದ್ದರು. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಿಸಿ ಕ್ಯಾಮರಾ ಪರಿಶೀಲಿಸಿ ಕಸ ಬೀಸಾಡಿದ ವ್ಯಕ್ತಿ ಅರಿಯಡ್ಕದ ತಕ್ಷ್ವಿದ್ದೀನ್ ಮದನಿ ಅವರನ್ನು ಪತ್ತೆ ಮಾಡಿ ರೂ.1 ಸಾವಿರ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here