ಹಿಂದೂ ಧಾರ್ಮಿಕ ಸಭೆಯಲ್ಲಿ ಅನ್ಯಮತೀಯರಿಗೆ ಸ್ಥಾನ -ಹಿಂ ಜಾ ವೇ ವಿರೋಧ

0

ಪುತ್ತೂರು: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅತಿಥಿ ಸ್ಥಾನದಲ್ಲಿ ಅನ್ಯಧರ್ಮಿಯರನ್ನು ಆಹ್ವಾನಿಸಿರುವುದನ್ನು ಹಿಂ ಜಾ ವೇ ಜಿಲ್ಲಾ ಸಂಯೋಜಕರಾದ ಮೋಹನದಾಸ್ ಕಾಣಿಯೂರು ತೀವ್ರವಾಗಿ ಖಂಡಿಸಿದ್ದಾರೆ.


ಹಿಂದೂ ಧಾರ್ಮಿಕ ಕ್ಷೇತ್ರವಾಗಿರುವ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯಕ್ರಮಗಳಿಗೆ ಪ್ರೋಟೋಕಾಲ್ ನೆಪದಲ್ಲಿ ಅನ್ಯಧರ್ಮಿಯರನ್ನು ಆಹ್ವಾನಿಸುವುದು ಸಂಪ್ರದಾಯ ಹಾಗೂ ಹಿಂದೂ ಧಾರ್ಮಿಕ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಕೂಡಲೇ ತಿದ್ದುಪಡಿ ಮಾಡಿ ಅನ್ಯಧರ್ಮಿಯರ ಹೆಸರನ್ನು ಆಮಂತ್ರಣ ಪತ್ರಿಕೆಯಿಂದ ಕೈಬಿಡಬೇಕು ಇಲ್ಲವಾದಲ್ಲಿ ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳುತ್ತದೆ ಎಂದು ಎಂದು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here