ಯುವವಾಹಿನಿ ಉಪ್ಪಿನಂಗಡಿ ಘಟಕದ ಪದಗ್ರಹಣ

0

ಉಪ್ಪಿನಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ ಉಪ್ಪಿನಂಗಡಿ ಘಟಕದ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಎಚ್. ಎಂ. ಅಡಿಟೋರಿಯಂನಲ್ಲಿ ನಡೆಯಿತು.


ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವರದರಾಜ್ ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಯುವಕರ ಸಮಾಜಮುಖಿ ಚಿಂತನೆಗಳಿಗೆ ದಾರಿ ತೋರಿಸಿ, ಅವರ ಆಶೋತ್ತರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯುವವಾಹಿನಿ ಸಂಘಟನೆಯು ಶಕ್ತಿ ತುಂಬುತ್ತಿದ್ದು, ಸೇವಾ ಮೌಲ್ಯಗಳ ಜೊತೆಯಲ್ಲಿ ನಾಯಕತ್ವದ ಪಥಕ್ಕೆ ಇದು ಬೆಳಕಾಗಿದೆ ಎಂದರು.


ಆರ್.ಸಿ. ನಾರಾಯಣ ರೆಂಜ ಮಾತನಾಡಿ, ಅಶಕ್ತರ ನೋವಿಗೆ ಸ್ಪಂದಿಸುವ ಸೇವೆ ನಮ್ಮ ಸಂವೇದನೆಯನ್ನು ತೋರಿಸುತ್ತದೆ ಮತ್ತು ಅಂತಹ ಪ್ರಯತ್ನಗಳು ಮಾನವನ ಸಾರ್ಥಕತೆ ಆಗಿರುತ್ತದೆ. ಸೇವೆಯ ಮೂಲಕ ಉಪ್ಪಿನಂಗಡಿ ಯುವವಾಹಿನಿ ಘಟಕವು ತನ್ನ ಜವಾಬ್ದಾರಿಯನ್ನು ಎತ್ತಿ ಹಿಡಿದಿದ್ದು, ಮುಂದಿನ ಪದಾಧಿಕಾರಿಗಳು ಈ ಸೇವಾ ಕಾರ್ಯ ನಿರಂತರವಾಗಿರುವಂತೆ ಸಂಕಲ್ಪ ತೊಡಬೇಕು ಎಂದರು.


ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಿಯೋಜಿತ ಅಧ್ಯಕ್ಷ ಮನೋಜ್ ಸಾಲ್ಯಾನ್ ಮುಂದಿನ ದಿನಗಳಲ್ಲಿ ಘಟಕವನ್ನು ಮುನ್ನಡೆಸಲು ಎಲ್ಲರ ಸಹಕಾರ ಕೇಳಿಕೊಂಡರು.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಅಜಿತ್ ಕುಮಾರ್ ಪಾಲೇರಿ, ಬೆಳ್ತಂಗಡಿಯ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರಕಾರಿ ವಕೀಲ ಮನೋಹರ್ ಕುಮಾರ್, ಉಪ್ಪಿನಂಗಡಿ ಸಿ.ಎ. ಬ್ಯಾಂಕಿನ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ನೆಲ್ಯಾಡಿ ಸಿ.ಎ. ಬ್ಯಾಂಕಿನ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ತಣ್ಣೀರುಪಂಥ ಸಿ.ಎ. ಬ್ಯಾಂಕಿನ ಅಧ್ಯಕ್ಷ ಜಯಾನಂದ ಕಲ್ಲಾಪು, ಬಾರ್ಯ ಸಿ.ಎ. ಬ್ಯಾಂಕಿನ ಅಧ್ಯಕ್ಷ ಸೇಸಪ್ಪ ಪೂಜಾರಿ ಹಾಗೂ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಡಾ. ರಮ್ಯಾ ರಾಜರಾಮ್, ವೆಂಕಪ್ಪ ಪೂಜಾರಿ, ತಣ್ಣೀರುಪಂಥ ಗ್ರಾ.ಪಂ. ಮಾಜಿ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಹರೀಶ್ ಉದ್ಯಂಗಳ, ಶಿವಗಿರಿ ಯಾತ್ರೆಯ ಸಂಚಾಲಕ ಹರೀಶ್ ಪೂಜಾರಿ ಕೊಣಾಜೆ, ನಿವೃತ್ತ ಕೆಎಸ್ಸಾರ್ಟಿಸಿ ಚಾಲಕ ನಾರಾಯಣ ಪೂಜಾರಿ ನೀರಕಟ್ಟೆ ಮತ್ತು ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಲೋಕೇಶ್ ಬೆತ್ತೋಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಘಟಕದ ನಿಕಟಪೂರ್ವಾಧ್ಯಕ್ಷ ನಾಣ್ಯಪ್ಪ ಕೋಟ್ಯಾನ್‌ರನ್ನು ಅವರ ಧರ್ಮಪತ್ನಿ ಶ್ರೀಮತಿ ಶಿಲ್ಪ ಮತ್ತು ಮಕ್ಕಳಾದ ಮಾ ಧ್ರುವ, ಬೇಬಿ ಧೃತಿಯವರ ಸಹಿತ ಅಭಿನಂದಿಸಲಾಯಿತು. ಕ್ರೀಡೆ, ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಮತ್ತು ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮೊಗ್ರು ಗ್ರಾಮದ ಚಂದ್ರಶೇಖರ ಪೂಜಾರಿಯವರ ಚಿಕಿತ್ಸಾ ವೆಚ್ಚಕ್ಕಾಗಿ ಘಟಕದ ವತಿಯಿಂದ ಸಾಂತ್ವನ ನಿಧಿ ನೀಡಲಾಯಿತು.


ಸಮಾರಂಭದಲ್ಲಿ ಮಂಗಳೂರು ಬಿಲ್ಲವ ಬ್ರಿಗೇಡ್ ಅಧ್ಯಕ್ಷ ಸದಾನಂದ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಮಾಜಿ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ., ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಅಶೋಕ್ ಪಡ್ಪು, ಉದ್ಯಮಿ ಯೋಗೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚುನಾವಣಾ ಅಧಿಕಾರಿ ಸೋಮಸುಂದರ್ ಕೊಡಿಪ್ಪಾನ ನೂತನ ಪದಾಧಿಕಾರಿಗಳ ವಿವರ ನೀಡಿದರು. ಕು.ಅಭಿಜ್ಞಾ ಪ್ರಾರ್ಥಿಸಿದರು.


ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವಾಧ್ಯಕ್ಷ ನಾಣ್ಯಪ್ಪ ಕೋಟ್ಯಾನ್ ಸ್ವಾಗತಿಸಿದರು. ನಿಯೋಜಿತ ಕಾರ್ಯದರ್ಶಿ ರಮೇಶ್ ಸಾಂತ್ಯ ವಂದಿಸಿದರು. ನಿರ್ದೇಶಕಿ ಶ್ರೀಮತಿ ಅನಿತಾ ಸತೀಶ್ ವರದಿ ಮಂಡಿಸಿದರು. ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here