






ಪುತ್ತೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿ ಆಕೆಯ ತಾಯಿ ನೀಡಿರುವ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.


ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನಿವಾಸಿ ಅಬ್ದುಲ್ ಗಫೂರ್ ಬಂಧಿತ ಆರೋಪಿ.



ದೂರಿನಲ್ಲೇನಿದೆ?
ಬೆಳಗಾವಿ ಮೂಲದ ಮಹಿಳೆಯು ತನ್ನ ಪತಿ ಹಾಗೂ ಅಪ್ರಾಪ್ತ ಪ್ರಾಯದ ಮಗಳೊಂದಿಗೆ ಕೆಲಸದ ನಿಮಿತ್ತ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದು, ಅಬ್ದುಲ್ ಗಫೂರ್ ಎಂಬಾತ ಬಾಲಕಿಗೆ ಜೇನು ಕೃಷಿ ಕಲಿಸುತ್ತೇನೆಂದು ಹೇಳಿದ್ದು, ಅದರಂತೆ ಮಹಿಳೆ ತನ್ನ ಮಗಳನ್ನು 2 ತಿಂಗಳಿಂದ ಅಬ್ದುಲ್ ಗಫೂರ್ ಮನೆಯಲ್ಲಿ ಬಿಟ್ಟಿರುತ್ತಾರೆ. ಬಾಲಕಿಯ ಹೆತ್ತವರು ಊರಿಗೆ ತೆರಳಿದ್ದವರು ಡಿ.19ರಂದು ಹಿಂತಿರುಗಿ ಬಂದಾಗ, ಬಾಲಕಿ ಅಳುತ್ತಾ ಬಂದು ಡಿ.2ರಿಂದ ಅಬ್ದುಲ್ ಗಫೂರ್ ಆಕೆಯನ್ನು ನಿರಂತರವಾಗಿ ಅತ್ಯಾಚಾರ ಮಾಡಿರುವುದಾಗಿ ತಿಳಿಸಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ. ಕ್ರ 118/2025, ಕಲಂ: 115(2),351(2),65(1) BNS-2023 4,6 ಪೋಕ್ಸೋ ಕಾಯ್ದೆ 2012 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.









