






ಪುತ್ತೂರು: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಇದರ ವತಿಯಿಂದ ಸೋಜಾ ಮೆಟಲ್ ಮಾರ್ಟ್ ಮಾಲಕ, ಕೊಡುಗೈ ದಾನಿ ದಿ.ಅಲೆಕ್ಸ್ ಮಿನೇಜಸ್ ಹಾಗೂ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಇದರ ಮಾಜಿ ಅಧ್ಯಕ್ಷ ದಿ.ಇಗ್ನೇಷಿಯಸ್ ಡಾಯಸದ ರವರ ಸ್ಮರಣಾರ್ಥ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಡಿ.21ರಂದು ಜರಗಿತು.





ದಿ.ಅಲೆಕ್ಸ್ ಮಿನೇಜಸ್ ರವರ ಪುತ್ರ ದೀಪಕ್ ಮಿನೇಜಸ್ ಹಾಗೂ ದಿ.ಇಗ್ನೇಷಿಯಸ್ ಡಾಯಸ್ ರವರ ಪುತ್ರ ದೀಪಕ್ ಡಾಯಸ್ ರವರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ರೋಗಿಗಳು ಶೀಘ್ರ ಗುಣಮುಖ ಹೊಂದಲಿ ಎಂದು ಹಾರೈಸಿದರು.



ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ರವರು ಸ್ವಾಗತಿಸಿ, ನಮ್ಮ ಸಂಘದ ಮಾಜಿ ಅಧ್ಯಕ್ಷ ದಿ.ಇಗ್ನೇಷಿಯಸ್ ಡಾಯಸ್ ರವರು ಸಂಘಕ್ಕೆ ನೀಡಿದ ಕೊಡುಗೆ ಅನನ್ಯ ಜೊತೆಗೆ ಕೊಡುಗೈ ದಾನಿ ದಿ.ಅಲೆಕ್ಸ್ ಮಿನೇಜಸ್ ರವರು ಸಮಾಜಕ್ಕೆ ನೀಡಿದ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗಿದೆ. ಅವರುಗಳ ಹೆಸರಿನಲ್ಲಿ ಇಂದು ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಯದುರಾಜ್, ಡಾ.ಯೋಗೀಶ್ ಸಹಿತ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಇದರ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









