






ಬಡಗನ್ನೂರು : ಈಶ್ವರಮಂಗಲ ಪ್ರಾಥಮಿಕ ಅರೋಗ್ಯ ಕೇಂದ್ರದ ವ್ಯಾಪ್ತಿಯ ಬಡಗನ್ನೂರು ಉಪಕೇಂದ್ರದ ಪಟ್ಟೆ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಡಿ 21 ರಂದು ನಡೆಯಿತು.



ಬಡಗನ್ನೂರು ಗ್ರಾ. ಪಂ ಸದಸ್ಯ ಲಿಂಗಪ್ಪ ಗೌಡ ಮೋಡಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಗುವಿಗೆ ಪೋಲಿಯೋ ಹಾಕುವ ಮೂಲಕ ಸಾಂಕೇತಿಕ ಉದ್ಘಾಟಿಸಿ ಶುಭ ಹಾರೖೆಸಿದರು



ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನಂದಿನಿ, ಸಮುದಾಯ ಆರೋಗ್ಯ ಅಧಿಕಾರಿ ಪ್ರಜ್ಞಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.










