






ಪುತ್ತೂರು: ‘GL ONE’ ಪ್ರಾಯೋಜಕತ್ವದಲ್ಲಿ ಡಿ.20ರಂದು ಪ್ರಾರಂಭಗೊಂಡಿರುವ ‘GL MALL UTSAV’ ಜ.04ರವರೆಗೆ ನಡೆಯಲಿದ್ದು, ಈ ‘GL MALL UTSAV’ನಲ್ಲಿ ವಾರಾಂತ್ಯದಲ್ಲಿ (ವೀಕೆಂಡ್) ವಿಶೇಷ ಕಾರ್ಯಕ್ರಮಗಳು ಮೂಡಿ ಬರುತ್ತಿದ್ದು, ಈ ವಾರಾಂತ್ಯದಲ್ಲಿ (ವೀಕೆಂಡ್) ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಸಹಭಾಗಿತ್ವದಲ್ಲಿ ಚಿತ್ರಕಲಾ ಸ್ಪರ್ಧೆ (ಡ್ರಾಯಿಂಗ್ ಕಾಂಫಿಟೇಶನ್) ನಡೆಯಲಿದೆ.


ಡಿ.28ರಂದು ಬೆಳಿಗ್ಗೆ 10ಗಂಟೆಯಿಂದ ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಸಹಭಾಗಿತ್ವದಲ್ಲಿ ಚಿತ್ರಕಲಾ ಸ್ಪರ್ಧೆ (ಡ್ರಾಯಿಂಗ್ ಕಾಂಫಿಟೇಶನ್) ನಡೆಯಲಿದೆ. ಈ ಚಿತ್ರಕಲಾ ಸ್ಪರ್ಧೆಯು 7 ವಿಭಾಗದಲ್ಲಿ ನಡೆಯಲಿದೆ . ಪ್ರಾಥಮಿಕ ಶಾಲಾ ವಿಭಾಗ, ಪ್ರೌಢ ಶಾಲಾ ವಿಭಾಗ, ಪದವಿ ಪೂರ್ವ ಕಾಲೇಜು ವಿಭಾಗ, ಪದವಿ ಕಾಲೇಜು ವಿಭಾಗ, ಸ್ನಾತಕೋತ್ತರ ಕಾಲೇಜು ವಿಭಾಗ, ಸಾರ್ವಜನಿಕ ವಿಭಾಗ, ದಿವ್ಯಾಂಗ ಕಲಾವಿದರಿಗೆ ವಿಶೇಷ ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪಶುಪತಿ ಶರ್ಮ 7411962374, 7411962375 ಸಂಪರ್ಕಿಸಬಹುದಾಗಿದೆ.




ಸ್ಪರ್ಧಿಗಳು ಗೂಗಲ್ ಫಾರ್ಮ್ ಭರ್ತಿ ಮಾಡಬೇಕು
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಮೇಲ್ಗಡೆ ಕೊಟ್ಟಿರುವ ಸ್ಕ್ಯಾನರ್ ಅನ್ನು ಸ್ಕ್ಯಾನ್ ಮಾಡಿ ಗೂಗಲ್ ಫಾರ್ಮ್ ಭರ್ತಿ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಹೆಸರು ನೋಂದಾವಣೆಗೆ ಡಿ.26 ಕೊನೆಯ ದಿನವಾಗಿದೆ. ರಸ್ತೆ ಸುರಕ್ಷತೆ, ನಮ್ಮೂರ ಜಾತ್ರೆ, ಸ್ವಚ್ಛ ನಗರ ಈ ಮೂರು ವಿಷಯದಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧಾ ಸ್ಥಳದಲ್ಲೇ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು, ಸ್ಪರ್ಧಾರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸ್ಥಳದಲ್ಲಿ ಹಾಜರಿರುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










