ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2025–28ನೇ ಸಾಲಿನ  ಪದಾಧಿಕಾರಿಗಳ ಅವಿರೋಧ ಆಯ್ಕೆ

0

ಅಧ್ಯಕ್ಷ: ಬಾಲಕೃಷ್ಣ ಕೆ.ಎಸ್.ಕೊಯಿಲ, ಪ್ರಧಾನ ಕಾರ್ಯದರ್ಶಿ ಪ್ರವೀಣ್  ಚೆನ್ನಾವರ, ಉಪಾಧ್ಯಕ್ಷ ಲೋಕೇಶ್ ಸುಬ್ರಹ್ಮಣ್ಯ, ಕಾರ್ಯದರ್ಶಿ ಸುಧಾಕರ್ ಕಾಣಿಯೂರು, ಕೋಶಾಧಿಕಾರಿ ಪ್ರವೀಣ್ ರಾಜ್ ಕೆ.ಎಸ್

ಕಡಬ: ಕಡಬ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ 2025–28ನೇ ಸಾಲಿನ ನೂತನ  ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಕೆ.ಎಸ್.ಕೊಯಿಲ, ಉಪಾಧ್ಯಕ್ಷ ಸ್ಥಾನಕ್ಕೆ ಲೋಕೇಶ್ ಬಿ.ಎನ್.ಸುಬ್ರಹ್ಮಣ್ಯ , ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರವೀಣ್ ಕುಮಾರ್ ಚೆನ್ನಾವರ, ಕಾರ್ಯದರ್ಶಿ ಸ್ಥಾನಕ್ಕೆ ಸುಧಾಕರ ಆಚಾರ್ಯ ಕಾಣಿಯೂರು, ಕೋಶಾಧಿಕಾರಿ ಸ್ಥಾನಕ್ಕೆ ಪ್ರವೀಣ್ ರಾಜ್ ಕೆ.ಎಸ್.ಕೊಯಿಲ ಅವರು ನಾಮಪತ್ರ ಸಲ್ಲಿಸಿದ್ದರು.

ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಗಳಿಗೆ ವಿಜಯ ಕುಮಾರ್ ಕಡಬ , ರತ್ನಾಕರ ಸುಬ್ರಹ್ಮಣ್ಯ, ಹರೀಶ್ ಬಾರಿಂಜ., ನಾಗರಾಜ್ ಎನ್. ಕೆ.ಕಡಬ , ಸ್ವಾತಿ ಬಾಳ್ತಿಲಾಯ ಕೆ.ವಿ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಎಲ್.ಎನ್.ರಾವ್ ಅವರು ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here