ಬೊಳ್ಳಂದೂರು ಶೀನಪ್ಪ ಪೂಜಾರಿಯವರ ಶ್ರದ್ಧಾಂಜಲಿ ಸಭೆ,ಯಕ್ಷಗಾನ ತಾಳಮದ್ದಳೆ

0

ಸರಳತೆ,ವಿನಯತೆಯ ಮಾತಿನಿಂದ ಜೀವನ ಕಟ್ಟಿಕೊಂಡ ಧೀಮಂತ ವ್ಯಕ್ತಿ ಶೀನಪ್ಪ ಪೂಜಾರಿ – ಸುರೇಶ್ ಹೆಗ್ಡೆ ಕುಲದಪಾರೆ

ಬಡಗನ್ನೂರು : ಕಾಸರಗೋಡು ತಾಲೂಕು ನೆಟ್ಟಣಿಗೆ ಗ್ರಾಮದ ಬೊಳ್ಳಂದೂರು ಶೀನಪ್ಪ ಪೂಜಾರಿ ರವರ ಶ್ರದ್ಧಾಂಜಲಿ ಸಭೆ ನಡೆಯಿತು.

ಸುರೇಶ್ ಹೆಗ್ಡೆ ಕುಲದಪಾರೆ ನುಡಿನಮನ ಸಲ್ಲಿಸಿ ಮಾತನಾಡಿ, ʼಬೊಳ್ಳಂದೂರು ಶೀನಪ್ಪ ಪೂಜಾರಿ ʼಬಡತನದಿಂದ ಮೇಲೆ ಬಂದವರು,ಅವರು ಎಲ್ಲವನ್ನು ಗಳಿಸಿದ್ದು ಮಾತಿನಿಂದ. ಅವರು ಒಬ್ಬ ಸಣ್ಣ ವ್ಯಾಪಾರಿಯಾಗಿದ್ದುಕೊಂಡು ಅವರ ದುಡಿಮೆಯಿಂದ ಇಷ್ಟೆಲ್ಲಾ ಕಟ್ಟಿಕೊಂಡಿದ್ದರು. ಅವರ ಹಿತವಾದ, ಮಿತವಾದ, ಮೃದುವಾದ ಮತ್ತು ನಯ ವಿನಯತೆಯ ಮಾತಿನಿಂದ ಇಷ್ಟೆಲ್ಲ ಪಡೆಯಲು ಸಾಧ್ಯವಾಗಿದೆ. ಒಬ್ಬ ಒಳ್ಳೆಯ ವ್ಯಕ್ತಿಯಾಗಿ, ಪರಮ ದೖೆವಭಕ್ತನಾಗಿ  ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುವ ಗುಣ ಹೊಂದಿದ್ದ ಅವರು ಸಯ್ಯಮದಿಂದ ಪ್ರೀತಿಯಿಂದ ಗಳಿಸಿದ ಕರ್ಮಯೋಗಿ, ಕಾಯಕಯೋಗಿ.  ಒಳ್ಳೆಯ ಸಂಸ್ಕಾರಯುತರಾಗಿದ್ದುಕೊಂಡು ಮೂರು ಮಕ್ಕಳನ್ನು ಹೊಂದಿದ್ದು ಒಬ್ಬರು ಇಂಜಿನಿಯರ್ ರಾಗಿ, ಒಬ್ಬರು ಶಿಕ್ಷಕರಾಗಿ ಇನ್ನೊಬ್ಬರು ಮನೆಯ ಮಡದಿಯಾಗಿ ಸಂಸ್ಕಾರಯುತ ಮಕ್ಕಳನ್ನು ಪಡೆದಿದ್ದಾರೆ ಎಂದರು.

ಕಲಾಭಿಮಾನಿ ಹಾಗೂ ಕಲಾ ಪೋಷಕರಾಗಿದ್ದರು:`ಕಲಾಭಿಮಾನಿ ಹಾಗೂ ಕಲಾ ಪೋಷಕರಾಗಿ  ಯಾವುದೇ ಕಾರ್ಯಕ್ರಮ ಆರಂಭದಿಂದ ಕೊನೆಯ ತನಕ ಆನಂದಿಸುತ್ತಿದ್ದರು.ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ಆತ್ಮಕ್ಕೆ ಚಿರಶಾಂತಿ  ಕೊರುತ್ತೇನೆ. ಕಲಾಭಿಮಾನಿ ಮತ್ತು ಕಲಾ ಪೋಷಕರನ್ನು ಕಳೆದುಕೊಂಡಿದ್ದೇವೆ ಅವರ ಕುಟುಂಬಕ್ಕೆ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂದು ನುಡಿನಮನ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮೃತರ ಪತ್ನಿ ದೇವಕಿ, ಮಕ್ಕಳಾದ  ಜಗದೀಶ .ಬಿ, ಚಂದ್ರಶೇಖರ ಸುಳ್ಯಪದವು,  ಆಶಾ  ಹಾಗೂ ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಬಂಧುಮಿತ್ರರು, ಗಣ್ಯರು ಉಪಸ್ಥಿತರಿದ್ದರು.

 ಯಕ್ಷಗಾನ ತಾಳಮದ್ದಳೆ
ದಿವಂಗತ ಶೀನಪ್ಪ ಪೂಜಾರಿ ರವರು ಒಬ್ಬ ಕಲಾಭಿಮಾನಿ ಕಲಾ ಪೋಷಕರಾಗಿದ್ದು ಅವರ ಮನದಾಸೆಯಂತೆ ʼಭೀಷ್ಮ ವಿಜಯʼ ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಳೆ ಅಯೋಜಿಸಲಾಗಿತ್ತು. ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚೆಂಡೆ ಮದ್ದಳೆ: ವಾದಕರಾಗಿ ಕೌಶಲ್ ರಾವ್ ಪುತ್ತಿಗೆ, ವಂದನ ಮಾಲೆಂಕಿ, ಚಕ್ರತಾಳ: ಸುಂದರ ನಾಯ್ಕ ಪಾಣಾಜೆ ಹಾಗೂ ಪಾತ್ರದಾರಿಗಳಾಗಿ ಸಾಲ್ವ: ಅಪ್ಪಕುಂಚಿ ಯಾದವ ಮಿಂಚಿಪದವು, ಅಂಬೆ: ಅಂಬಾ ಪ್ರಸಾದ್ ಪಾತಾಳ  ಭೀಷ್ಮ: ಜಬ್ಬಾರ್ ಸಮೋ ಪರಶುರಾಮ: ಗಣರಾಜ್ ಭಟ್ ಕುಂಬ್ಳೆ ವೃದ್ಧ ಬ್ರಾಹ್ಮಣ: ಲೋಹಿತ್ ಎಸ್ ಕೆ  ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here