






ಪುತ್ತೂರು: ಮರೀಲು ಸ್ನೇಹನಗರ ಇಲ್ಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ 24ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಡಿ.31 ರಂದು ಸಂಜೆ ಮರೀಲು ಸ್ನೇಹನಗರದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ಜರಗಲಿದೆ.


ಸ್ನೇಹನಗರದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಯ ಗೌರವ ಸಲಹೆಗಾರರಾದ ಭಾಸ್ಕರ ಎಂ.ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಕೆಮ್ಮಿಂಜೆ ಶ್ರೀರಾಮ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಬಳಿಕ ಮಹಾಪೂಜೆ, ಅನ್ನಸಂತರ್ಪಣೆ, ಸಾತ್ವಿಕ್ ಪ್ರಭುರವರಿಂದ ಕೊಳಲು ವಾದನ ನಡೆಯಲಿರುವುದು. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಅರುಣ್ ಕ್ಯಾಂಪ್ಕೋ, ಗೌರವಾಧ್ಯಕ್ಷ ರಾಜೇಂದ್ರ ಕೆ.ಮೆಸ್ಕಾಂ, ಕಾರ್ಯದರ್ಶಿ ಶಿವಕುಮಾರ್ ಹೆಗ್ಡೆ, ಕೋಶಾಧಿಕಾರಿ ಹರೀಶ್ ರೈ ಪ್ರಗತಿ ಲೇಔಟ್ ಹಾಗೂ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












