ನೆಲ್ಯಾಡಿ ಜೆಸಿಐ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರಿಗೆ ಜೆಸಿಐ ಭಾರತದ ರಾಷ್ಟ್ರಮಟ್ಟದ ಪ್ರಶಸ್ತಿ

0

ನೆಲ್ಯಾಡಿ: ಜೆಸಿಐ ಭಾರತ ಕೊಡಮಾಡುವ ಪ್ರತಿಷ್ಠಿತ 100% ಕ್ಷಮತೆ ಪ್ರಶಸ್ತಿಗೆ (100%effieency award ) ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು ಭಾಜನರಾಗಿದ್ದಾರೆ.


ರಾಷ್ಟ್ರಮಟ್ಟದಲ್ಲಿ ಜೆಸಿಐ ವಲಯ 15ರ 8 ಮಂದಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅದರಲ್ಲಿ ಡಾ. ಸುಧಾಕರ್ ಶೆಟ್ಟಿಯವರು ಕೂಡ ಓರ್ವರು. ಡಿ.27ರಿಂದ 29ರವರೆಗೆ ಚೆನ್ನೈನಲ್ಲಿ ನಡೆದ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಅಂಕೂರು ಜಂಜೂನ್‌ವಾಲಾ ಅವರಿಂದ ಸ್ವೀಕರಿಸಿದರು. ಪ್ರಸ್ತುತ ಡಾ. ಸುಧಾಕರ ಶೆಟ್ಟಿಯವರು ಜೆಸಿಐ ವಲಯ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here