ಕೋಡಿಂಬಾಡಿ:ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆತ – ದಂಡ ಪಾವತಿ ನಿರಾಕರಣೆ-ಪೊಲೀಸ್ ದೂರು

0

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದಿರುವುದನ್ನು ಒಪ್ಪಿಕೊಂಡಿರುವ ವ್ಯಕ್ತಿ ದಂಡ ಪಾವತಿಸಲು ನಿರಾಕರಿಸಿರುವ ಕುರಿತು ಗ್ರಾಮ ಪಂಚಾಯತ್‌ನಿಂದ ಪೊಲೀಸರಿಗೆ ದೂರು ನೀಡಲಾಗಿದೆ.


ಪುತ್ತೂರು-ಉಪ್ಪಿನಂಗಡಿ ರಸ್ತೆಯ ಅರ್ಬಿ ಎಂಬಲ್ಲಿ ಅಜ್ವಿ ಅಜ್ವು ದಾರಂದಕುಕ್ಕು,ಮರಿಯಾ ಕಾಂಪ್ಲೆಕ್ಸ್ ಎಂಬವರು ತ್ಯಾಜ್ಯ ಎಸೆದು ಹೋಗಿರುವುದು ಅದರಲ್ಲಿ ದೊರೆತ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ಕಂಡು ಬಂದಿದೆ.ಈ ಕುರಿತು ಅವರಲ್ಲಿ ವಿಚಾರಿಸಿದಾಗ ಕಸ ಬಿಸಾಡಿರುವುದು ಒಪ್ಪಿಕೊಂಡಿರುತ್ತಾರೆ.ಆದರೆ ದಂಡ ಪಾವತಿಸಲು ನಿರಾಕರಿಸಿರುತ್ತಾರೆ ಎಂದು ಆರೋಪಿಸಿ ಪುತ್ತೂರು ನಗರ ಪೊಲೀಸರಿಗೆ ಗ್ರಾ.ಪಂ.ಕಾರ್ಯದರ್ಶಿ ಅಣ್ಣು ದೂರು ನೀಡಿದ್ದಾರೆ.ಗ್ರಾ.ಪಂ.ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಈ ಸಂದರ್ಭ ಜೊತೆಗಿದ್ದರು.

LEAVE A REPLY

Please enter your comment!
Please enter your name here