ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ 23ನೇ ಲಕ್ಕಿ ಬಂಪರ್ ಡ್ರಾ

0

ಭಾರತಿ ಶೆಣೈಗೆ ಒಲಿದ ಜುಪಿಟರ್


ಪುತ್ತೂರು:ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ, ಸಂಪಾದಿಸಿದ ಒಂದಂಶವನ್ನು ಸಮಾಜಕ್ಕೆ ಅರ್ಪಣೆ ಮಾಡುವ ವಿಶೇಷ ಗುಣವುಳ್ಳ ಪುತ್ತೂರಿನ ಶೇಟ್ ಇಲೆಕ್ಟ್ರಾನಿಕ್ಸ್‌ನ ಮಾಲಕ ರೂಪೇಶ್ ಶೇಟ್ ಅವರ ಮಾಲಕತ್ವದಲ್ಲಿ ಕೋರ್ಟ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಸುಮಾರು 27 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗೃಹೋಪಯೋಗಿ ವಸ್ತುಗಳ ಜನಪ್ರಿಯ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್‌ನ 23ನೇ ಲಕ್ಕಿ ಬಂಪರ್ ಡ್ರಾ ಡಿ.31ರಂದು ನಡೆಯಿತು.ಭಾರತಿ ಶೆಣೈ ಅವರು ಬಂಪರ್ ಬಹುಮಾನವಾದ ಜುಪಿಟರ್ ವಾಹನ ಪಡೆದ ಅದೃಷ್ಟಶಾಲಿಯಾದರು.


ಲಕ್ಕಿ ಡ್ರಾದ 10 ಆಕರ್ಷಕ ಬಹುಮಾನಗಳಲ್ಲಿ ರೆಫ್ರಿಜರೇಟರ್-ವಿದ್ಯಾಶ್ರಿ ಎನ್, ಎಲ್‌ಇಡಿ ಟಿವಿ-ರೇವತಿ ಉಮೇಶ್, ವಾಷಿಂಗ್‌ಮೆಷಿನ್-ದಿ ಪುತ್ತೂರು ಕ್ಲಬ್, ಸೋಫಾ-ಜತ್ತಪ್ಪ ಗೌಡ, ಏರ್‌ಕೂಲರ್-ಹೊಟೇಲ್ ರಾಯಲ್ ಮ್ಯಾಕ್ಸ್, ಮಿಕ್ಸಿ-ಸುಚಿತ್ರ ಎಲ್, ಫೋನ್-ಅಬೂಬಕ್ಕರ್, ಐರನ್ ಬಾಕ್ಸ್-ಅನ್ವಿತಾ, ಬ್ಲೂಟೂತ್ ಚಾರ್ಜರ್-ಗೋಪಿನಾಥ್ ಕಾಮತ್ ಅವರಿಗೊಲಿಯಿತು.

ಭಾರತೀಯ ವೈದ್ಯಕೀಯ ಸಂಘದ ನಿಕಟಪೂರ್ವ ಕಾರ್ಯದರ್ಶಿ ಡಾ.ಗಣೇಶ್‌ಪ್ರಸಾದ್ ಮುದ್ರಾಜೆ, ನ್ಯಾಯವಾದಿ ಚಿದಾನಂದ ಬೈಲಾಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಬಹುಮಾನಗಳ ಚೀಟಿಯನ್ನು ಎತ್ತಿ ವಿಜೇತರನ್ನು ಆಯ್ಕೆ ಮಾಡಿ ಅಭಿನಂದಿಸಿದರು.ಸಂಸ್ಥೆಯ ಮಾಲಕ ರೂಪೇಶ್ ಶೇಟ್ ಸ್ವಾಗತಿಸಿ, ವಂದಿಸಿದರು.ಯಶೋಧರ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಲಾಭಾಂಶದಲ್ಲಿ ಒಂದಂಶವನ್ನು ಸಮಾಜಕ್ಕೆ ನೀಡುವುದು ದೊಡ್ಡ ಗುಣ:
ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಘಟಕದ ನಿಕಟಪೂರ್ವ ಕಾರ್ಯದರ್ಶಿ ಡಾ.ಗಣೇಶ್‌ಪ್ರಸಾದ್ ಮುದ್ರಾಜೆ ಅವರು ಮಾತನಾಡಿ, ಸಮಾಜದಿಂದ ಪಡೆದ ಲಾಭದಲ್ಲಿ ಒಂದಂಶವನ್ನು ಸಮಾಜಕ್ಕೆ ನೀಡುವ ಗುಣ ಬಹಳ ದೊಡ್ಡದು.ಇಂತಹ ಸೇವೆಯನ್ನು ಕಳೆದ ಹಲವು ವರ್ಷಗಳಿಂದ ರೂಪೇಶ್ ಶೇಟ್ ಮಾಡುತ್ತಿದ್ದಾರೆ. ಇದು ಅವರ ದೊಡ್ಡ ಗುಣ ಎಂದರು.

ಗ್ರಾಹಕರಿಗೆ ಕೃತಜ್ಞತೆಗಳು
ಪ್ರೋತ್ಸಾಹಿಸಿದ ನಮ್ಮ ಗ್ರಾಹಕರಿಗೆಲ್ಲರಿಗೂ ತುಂಬುಹೃದಯದ ಧನ್ಯವಾದಗಳು.ಮುಂದೆಯೂ ಇದೇ ರೀತಿಯ ಸಹಕಾರವನ್ನು ನೀಡಬೇಕಾಗಿ ವಿನಂತಿ.ಗ್ರಾಹಕರಿಗೆ ನಗುಮೊಗದ ಸೇವೆ ನೀಡಿದ ಸಂಸ್ಥೆಯ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು
-ರೂಪೇಶ್ ಶೇಟ್,
ಮಾಲಕರು ಶೇಟ್ ಎಲೆಕ್ಟ್ರಾನಿಕ್ಸ್

LEAVE A REPLY

Please enter your comment!
Please enter your name here