ಜ.3-4:ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ, ಶ್ರೀ ಧರ್ಮದೈವಗಳ ನೇಮೋತ್ಸವ

0

ಪುತ್ತೂರು: ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.3 ಹಾಗೂ 4ರಂದು ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಮತ್ತು ಶ್ರೀ ಧರ್ಮದೈವಗಳ ನೇಮೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜರಗಲಿದೆ.


ಜ.2ರಂದು ರಾತ್ರಿ ಶ್ರೀ ದೇವತಾ ಪ್ರಾರ್ಥನೆ ಹಾಗೂ ಉಗ್ರಾಣ ಪೂಜೆ, ಜ.3ರಂದು ಬೆಳಿಗ್ಗೆಯಿಂದ ಸಾಯಂಕಾಲದ ತನಕ ಪುತ್ತೂರಿನ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನೆ, ಬೆಳಿಗ್ಗೆ ಗಣಹೋಮ, ಆಶ್ಲೇಷ ಬಲಿ, ನಾಗತಂಬಿಲ, ಶ್ರೀ ಮಹಾವಿಷ್ಣುಮೂರ್ತಿ ದೇವರಿಗೆ ಪವಮಾಭಿಷೇಕ, ಮಹಾಪೂಜೆ ಮತ್ತು ಮಹಾ ಅನ್ನ ಸಂತರ್ಪಣೆ, ಸಂಜೆ ಶ್ರೀ ದೇವರ ಬಲಿ ಹೊರಟು ಉತ್ಸವ ದರ್ಶನ ಬಲಿ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದವರೆಗೆ ಲಕ್ಷ್ಮೀನಾರಾಯಣ ಭಜನ ವೃಂದ ಯರ್ಮುಂಜಪಳ್ಳ ಪಡ್ನೂರು ಇವರಿಂದ ಕುಣಿತ ಭಜನೆಯೊಂದಿಗೆ ಮತ್ತು ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳ ಪುಣಚ, ಶ್ರೀ ದೇವರ ಸವಾರಿ ನಂತರ ಶ್ರೀ ದೇವರಿಗೆ ಕಲಶಾಭಿಷೇಕ, ಸಂಪ್ರೋಕ್ಷತೆ, ವೈದಿಕ ಮಂತ್ರಾಕ್ಷತೆ, ತೀರ್ಥಪ್ರಸಾದ, ಜ.4ರಂದು ಬೆಳಿಗ್ಗೆ ತಿಂಗಳ ಬಲಿವಾಡು ಕೂಟ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ದೈವಗಳ ಭಂಡಾರ ತೆಗೆಯುವುದು, ದುರ್ಗಾ ಪೂಜೆ, ಕಾರ್ತಿಕ ಪೂಜೆ, ಅನ್ನಸಂತರ್ಪಣೆ, ರಾತ್ರಿ ಧರ್ಮದೈವಗಳ ನೇಮೋತ್ಸವ ಜರಗಲಿರುವುದು.


ಸಹಕರಿಸುವ ಸಂಘ-ಸಂಸ್ಥೆಗಳು:

ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣು ಮೂರ್ತಿ ನವೋದಯ ಸ್ವ-ಸಹಾಯ ಗುಂಪು, ಅಮ್ಮುಂಜ ಪಾಲಿಂಜೆ ಶ್ರೀ ಶನೀಶ್ವರ ಪೂಜಾ ಸಮಿತಿ, ಅಮ್ಮುಂಜ ಪಾಲಿಂಜೆ ಶ್ರೀ ತುಳಸಿ ನವೋದಯ ಸ್ವ-ಸಹಾಯ ಗುಂಪು, ಅಮ್ಮುಂಜ ಪಾಲಿಂಜೆ ಶ್ರೀ ಸರಸ್ವತಿ ನವೋದಯ ಸ್ವ-ಸಹಾಯ ಗುಂಪು, ಅಮ್ಮುಂಜ ಪಾಲಿಂಜೆ ಶ್ರೀ ಮೈತ್ರೇಯಿ ಸ್ವ-ಸಹಾಯ ಗುಂಪು, ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ, ಪಾಲಿಂಜೆ ಶ್ರೀ ವಿಷ್ಣುಸಂಜೀವಿನಿ ಸಂಘ, ಪಂಜಳ ಜೈಶ್ರೀರಾಮ್ ಗೆಳೆಯರ ಬಳಗ, ಅಮ್ಮುಂಜ ಪಾಲಿಂಜೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ, ಪಂಜಳ ಶ್ರೀ ಷಣ್ಮುಖ ಗೆಳೆಯರ ಬಳಗ ಸಹಕರಿಸಲಿದೆ.
ಭಕ್ತಾಭಿಮಾನಿಗಳು ಈ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಪೂಜಾರಿ ಅಮ್ಮುಂಜ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಪವಿತ್ರಪಾಣಿ, ಶ್ರೀ ಕ್ಷೇತ್ರದ ಅರ್ಚಕರು ಹಾಗೂ ಊರ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.2:ಹಸಿರು ಹೊರೆಕಾಣಿಕೆ…

ಶ್ರೀ ಕ್ಷೇತ್ರದ ಜಾತ್ರೋತ್ಸವ ಹಾಗೂ ನೇಮೋತ್ಸವದ ಪ್ರಯುಕ್ತ ಜ.2ರಂದು ಸಂಜೆ ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿಯಿಂದ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಹೊರಡಲಿರುವುದು. ಭಕ್ತಾಧಿಗಳಾದ ತಾವೆಲ್ಲರೂ ಹಸಿರು ಹೊರೆಕಾಣಿಕೆಯನ್ನು ಶ್ರೀ ದೇವರಿಗೆ ಸಮರ್ಪಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here