







ಪುತ್ತೂರು: ಕೆಎಸ್ಆರ್ಟಿಸಿ ಪುತ್ತೂರು ಘಟಕದಲ್ಲಿ ಹೊಸ ವರ್ಷಾಚರಣೆಯ ಅಂಗವಾಗಿ ಜ.1ರಂದು ರೋಟರಿ ಕ್ಲಬ್ ಬ್ಲಡ್ ಕ್ಯಾಂಪ್ಕೋ ಪುತ್ತೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಸಲಾಯಿತು.


ಕೆಎಸ್ಆರ್ಟಿಸಿ ಪುತ್ತೂರು ಘಟಕದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಅವರ ಅಧ್ಯಕ್ಷತೆ ವಹಿಸಿದ್ದರು. ಬ್ಲಡ್ ಬ್ಯಾಂಕ್ನ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.



ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಡಾ. ಶ್ರೀಪ್ರಕಾಶ್, ಬ್ಲಡ್ ಬ್ಯಾಂಕ್ನ ವೈದ್ಯಾಧಿಕಾರಿ ರಾಮಕೃಷ್ಣ ರಾವ್ ಅವರು ವಿಭಾಗೀಯ ಯಾಂತ್ರಿಕ ಅಭಿಯಂತರ ವೆಂಕಟೇಶ್, ಲೆಕ್ಕಪತ್ರ ಮೇಲ್ವಿಚಾರಕ ಪೂರ್ಣೇಶ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಹೊಸ ವರ್ಷಾಚರಣೆಯ ಅಂಗವಾಗಿ ಪ್ರಜ್ಞಾ ಆಶ್ರಮಕ್ಕೆ ಹಣ್ಣು ಹಂಪಲು ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು. ವೆಂಕಟ್ರಮಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಾಧವ ಶೆಣೈ ವಂದಿಸಿದರು.










